ಯಾದಗಿರಿ | ಸಾಗಾಟದ ವೇಳೆ ವಾಹನದಲ್ಲಿ ಉಸಿರು ಗಟ್ಟಿ 30 ಕುರಿಗಳ ಸಾವು
Update: 2025-03-17 23:32 IST

ಯಾದಗಿರಿ : ಕುರಿಗಳನ್ನು ವಾಹನದಲ್ಲಿ ಸಾಗಾಟ ಮಾಡುತ್ತಿರುವಾಗ ವಾಹನದಲ್ಲಿಯೇ ಉಸಿರುಗಟ್ಟಿ 30 ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿನ ಯಲ್ಲೇರಿ ಗ್ರಾಮದ ಕುರಿಗಾಹಿನೊರ್ವ ಗ್ರಾಮದಿಂದ ವಿಜಯಪುರ ಕಡೆಗೆ ಇಂದು ಸಾಗಾಣಿಕೆ ಮಾಡುವಾಗ ಗುಂಡುಗುರ್ತಿ ಸಮೀಪ ಉಸಿರು ಗಟ್ಟಿ 30 ಕುರಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.