ಯಾದಗಿರಿ | ಕೋಲಿ ಕಬ್ಬಲಿಗ ಸಮಾಜ ಸಂಘದ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಕಾವಲಿ, ಉಪಾಧ್ಯಕ್ಷರಾಗಿ ಭೀಮು ಗುಡೇಬಲ್ಲೂರ್ ಆಯ್ಕೆ

ಯಾದಗಿರಿ : ತಾಲೂಕಿನ ಸೈದಾಪುರ ಸಮಿಪದ ಬಾಡಿಯಾಲ ಗ್ರಾಮದಲ್ಲಿ ಬಾಡಿಯಲ ಗ್ರಾಮ ಕೋಲಿ ಕಬ್ಬಲಿಗ ಸಮಾಜ ಸಂಘ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಕಾವಲಿ ಉಪಾಧ್ಯಕ್ಷರಾಗಿ ಭೀಮು ಗುಡೇಬಲ್ಲೂರ್ ರನ್ನು ಆಯ್ಕೆ ಮಾಡಲಾಯಿತು.
ಸೈದಾಪುರ ವಲಯ ಕೂಲಿ ಕಬ್ಬಲಿಗ ಸಮಾಜ ಅಧ್ಯಕ್ಷರಾದ ರಮೇಶ್ ಭೀಮನಹಳ್ಳಿ ಅವರು ಮಾತನಾಡಿ, ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರಿಗೆ ನಮ್ಮ ಸಮಾಜದ ಗುರುಗಳಾದ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ತತ್ವ ಸಿದ್ಧಾಂತ ಅವರ ಮಾರ್ಗದರ್ಶನದಲ್ಲಿ ನಡೆದು ನಮ್ಮ ಕೋಲಿ ಕಬ್ಬಲಿಗ ಸಮಾಜವನ್ನು ಒಗ್ಗಟ್ಟಿನಿಂದ ಮುನ್ನಡೆಸಿಕೊಂಡು ಹೋಗಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸೈದಾಪೂರ ವಲಯ ಕೋಲಿ ಕಬ್ಬಲಿಗ ಸಮಾಜ ಸಂಘದ ಗೌರವಾಧ್ಯಕ್ಷರಾದ ವೆಂಕಟೇಶ್ ಗಡದ್, ಉಪಾಧ್ಯಕ್ಷರಾದ ಗುರುರಾಜ್ ಘಂಟಿ, ಪ್ರಧಾನ ಕಾರ್ಯದರ್ಶಿಯಾದ ಪ್ರಭು ಗೂಗಲ್, ಮಾಜಿ ಅಧ್ಯಕ್ಷರಾದ ತಾಯಪ್ಪ ಚಿಗರಿ, ಯುವ ಘಟಕ ಅಧ್ಯಕ್ಷರಾದ ಆಂಜನೇಯ ಕಟ್ಟಿಮನಿ ರಾಂಪುರ್, ಶಿವರಾಜ್ ದುಪ್ಪಲ್ಲಿ, ನಗರ ಘಟಕ ಅಧ್ಯಕ್ಷರಾದ ಅಂಬರೀಶ್ ರಾಚನಹಳ್ಳಿಕರ್, ಆನಂದ್ ಬಾಗ್ಲಿ ಸೈದಾಪುರ್, ಬಾಡಿಯಲ್ ಗ್ರಾಮದ ಮುಖಂಡರಾದ ಅಯ್ಯಪ್ಪ ಇರಿಜನ್, ದೇವಪುತ್ರ ತಿಮ್ಮೋಜಿ, ಹನುಮಂತರಾಯ ತಿಮ್ಮಾಜಿ, ರಾಮಣ್ಣ ಗೂಡುರ, ಮಂಜುನಾಥ್ ಕಾವಲಿ, ಬಸಲಿಂಗ ಕಾವಲಿ, ಮಂಜುನಾಥ್ BK, ದೇವು ಗುರ್ಜಲ, ಮಹಾಂತೇಶ್ ಗೌಲ್, ಕಾಶಿನಾಥ್ ರಾಮಣ್ಣೋರ, ಯಲ್ಲಪ್ಪ ಕಾವಲಿ, ಚೌಡಪ್ಪ ಜನಕೇರಿ ಇನ್ನು ಮುಂತಾದ ನಮ್ಮ ಕೂಲಿ ಕಬ್ಬಲಿಗೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.