ಯಾದಗಿರಿ | ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳಿಸುವಂತೆ ಸೂಚಿಸಿದ ಜಿಲ್ಲಾ ಪಂಚಾಯತ್‌ ಸಿಇಓ

Update: 2025-03-18 21:42 IST
ಯಾದಗಿರಿ | ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳಿಸುವಂತೆ ಸೂಚಿಸಿದ ಜಿಲ್ಲಾ ಪಂಚಾಯತ್‌ ಸಿಇಓ
  • whatsapp icon

ಕೆಂಭಾವಿ : ಪಟ್ಟಣದ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ಹಾಗೂ ಸಮುದಾಯ ಆಸ್ಪತ್ರೆಗೆ ಜಿಲ್ಲಾ ಪಂಚಾಯತ್‌ ಸಿಇಓ ಅವರು ಭೇಟಿ ನೀಡಿ ಕುಂದು ಕೊರತೆಗಳನ್ನು ವಿಚಾರಿಸಿದರು.

ಮಂಗಳವಾರ ಜಿಲ್ಲಾ ಪಂ ಸಿಇಓ ಲವೀಶ್ ವರಡಿಯಾ ಮುಖ್ಯಕಾರ್ಯನಿರ್ವಾಹಣ ಅಧಿಕಾರಿ ಅವರು ಪಟ್ಟಣಕ್ಕೆ ಭೇಟಿ ನೀಡಿ, ಮೊದಲಿಗೆ ಸಮುದಾಯ ಆಸ್ಪತ್ರೆಗೆ ಆಗಮಿಸಿದ ಅವರು ಆಸ್ಪತ್ರೆಯಲ್ಲಿನ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿದರು.

ನಂತರ ಪಟ್ಟಣದ ಮೋರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ದೊರಕುವ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ ನಂತರ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿದರು.

ಕೆಲವೇ ದಿನಗಳಲ್ಲಿ ಎಸೆಸೆಲ್ಸಿ ಪರಿಕ್ಷೆಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಚೆನ್ನಾಗಿ ವಿದ್ಯಾಭ್ಯಾಸ ಮಾಡುವಂತೆ ವಿಧ್ಯಾರ್ಥಿಗಳಿಗೆ ಸೂಚಿಸಿದ ಅವರು, ಈ ಬಾರಿ ನಡೆಯುವ ಎಸೆಸೆಲ್ಸಿ ಪರಿಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯುವಂತೆ ಹೇಳಿದ ಅವರು, ಕಲಿಯುವ ಸಮಯದಲ್ಲಿ ವಿದ್ಯಾರ್ಥಿಗಳು ಯಾವುದೇ ರೀತಿಯ ದುಷ್ಚಟಗಳಿಗೆ ಬಲಿಯಾಗದೇ ಏಕಾಗ್ರತೆಯಿಂದ ಓದುವುದರ ಜೊತೆಗೆ ಉತ್ತಮ ಅಂಕವನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಯಲ್ಲಪ್ಪ ಕನ್ನೂರ , ಭೀಮಾಬಾಯಿ ಬಿರಾದರ , ಸಿ.ಆರ್.ಪಿ. ಶ್ರೀಶೈಲ ಪಾಸೋಡಿ , ಕೆಂಭಾವಿ ಪೋಲಿಸ್ ಠಾಣೆಯ ಪಿ.ಎಸ್.ಐ ಅಮೋಜ್ ಕಾಂಬಳೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News