ನರಸಿಂಗಪೇಟ | ಸ್ಮಶಾನ ಭೂಮಿ ಒದಗಿಸಲು ತಹಶೀಲ್ದಾರ್‌ಗೆ ಮನವಿ
Update: 2025-03-18 19:48 IST

ಸುರಪುರ : ನಗರದ ವಾರ್ಡ್ ಸಂಖ್ಯೆ 1ರ ನರಸಿಂಘ ಪೇಟ ಗ್ರಾಮದ ಜನರಿಗೆ ರುದ್ರ ಭೂಮಿ ಇಲ್ಲದೇ ತುಂಬಾ ತೊಂದರೆ ಉಂಟಾಗುತ್ತಿದ್ದು, ರುದ್ರಭೂಮಿ ಮಂಜೂರು ಮಾಡುವಂತೆ ತಹಶೀಲ್ದಾರ್ ಗೆ ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ, ಜನರಿಗೆ ಮೂಲಭೂತ ಸೌಲಭ್ಯಗಳಲ್ಲಿ ರುದ್ರ ಭೂಮಿಯು ಕೂಡ ಅಗತ್ಯವಾಗಿದ್ದು, ರುದ್ರಭೂಮಿ ಇಲ್ಲದೆ ನರಸಿಂಗಪೇಟ ಗ್ರಾಮದ ಜನರು ಶವ ಸಂಸ್ಕಾರಕ್ಕೆ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ರುದ್ರ ಭೂಮಿಯನ್ನು ಒದಗಿಸಿಕೊಡಬೇಕು ಇಲ್ಲದಿದ್ದಲ್ಲಿ ಗ್ರಾಮದ ಜನರೊಂದಿಗೆ ಪ್ರತಿಭಟನೆ ಮುಂದಾಗುವುದಾಗಿ ತಿಳಿಸಿದರು.
ಮನವಿಯನ್ನು ಸ್ವೀಕರಿಸಿದ ತಹಶೀಲ್ದಾರ್ ಹುಸೇನ್ ಸಾಬ್ ಅವರು, ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ಪ್ರಶಾಂತ್ ಹಾಗೂ ಕಂದಾಯ ಇಲಾಖೆಯ ರವಿ ನಾಯಕ ಉಪಸ್ಥಿತರಿದ್ದರು.