ಯಾದಗಿರಿ | ಅರ್ಜಿ ಆಹ್ವಾನ

ಯಾದಗಿರಿ : ಯಾದಗಿರಿ ಜಿಲ್ಲೆಯ ಜಿಲ್ಲಾ ಸರ್ಕಾರಿ ವಕೀಲರು ಹುದ್ದೆ, ಅಪರ ಜಿಲ್ಲಾ ಸರ್ಕಾರಿ ವಕೀಲರು ಹುದ್ದೆ ಹಾಗೂ ಅಪರ ಸರ್ಕಾರಿ ವಕೀಲರು 3 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ತಿಳಿಸಿದ್ದಾರೆ.
ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಾನೂನು ಇಲಾಖೆ ವಿಧಾನ ಸೌಧ ಬೆಂಗಳೂರು ಅವರು ಯಾದಗಿರಿ ಜಿಲ್ಲೆಯ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆ ಅಪರ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆ ಹಾಗೂ ಅಪರ ಸರ್ಕಾರಿ ವಕೀಲರ 3 ಹುದ್ದೆಯನ್ನು ಹೊಸದಾಗಿ ತುಂಬಲು ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು, 1977 ನಿಯಮ 5 ಮತ್ತು 26 (2) ಹಾಗೂ 12 (ಎ) (ಬಿ) ಮತ್ತು (ಸಿ) ರನ್ವಯ ಪ್ರಕಟಿಸಿದೆ.
ಯಾದಗಿರಿ ಜಿಲ್ಲೆಯ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆ, ಅಪರ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆ ಹಾಗೂ ಅಪರ ಸರ್ಕಾರಿ ವಕೀಲರ 3 ಹುದ್ದೆಗಳು ಖಾಲಿ ಇರುವ ಪ್ರಯುಕ್ತ ಅಪರ ಸರ್ಕಾರಿ ವಕೀಲರ ಹುದ್ದೆಗೆ ಬೇಕಾಗಿರುವ ಅರ್ಹತೆ ಕಾನೂನು ಪದವಿ ಹೊಂದಿರಬೇಕು, 7 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿದ ವಕೀಲರು ಆಗಿರಬೇಕು. ಜಿಲ್ಲಾ ಸರ್ಕಾರಿ ವಕೀಲರು ಹಾಗೂ ಅಪರ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ಬೇಕಾಗಿರುವ ಅರ್ಹತೆ ಕಾನೂನು ಪದವಿ ಹೊಂದಿರಬೇಕು, 10 ವರ್ಷಗಳ ಕಾಲ ವಕೀಲ ವೃತ್ತಿಯನ್ನು ಪೂರೈಸಿದ ವಕೀಲರು ಆಗಿರಬೇಕು. ಈ ಅರ್ಹತೆ ಹೊಂದಿರುವ ವಕೀಲರು 2025ರ ಮಾರ್ಚ್ 25ರ ಒಳಗೆ ಜಿಲ್ಲಾಧಿಕಾರಿ ಕಚೇರಿ ಯಾದಗಿರಿ ಜೆಯುಡಿ ಸಂಕಲನಕ್ಕೆ ನೇರವಾಗಿ ಅರ್ಜಿಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.