ಯಾದಗಿರಿ | ಅಂಬೇಡ್ಕರ್ ಮೂರ್ತಿ ನಿರ್ಮಾಣಕ್ಕೆ ಆಗ್ರಹಿಸಿ ಕಾಲ್ನಡಿಗೆ ಜಾಥಾ

ಯಾದಗಿರಿ : ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಭೀಮ ಪ್ರಜಾ ಸಂಘದಿಂದ ಹಮ್ಮಿಕೊಂಡಿರುವ ಬೀದರ್ ನಿಂದ ಬೆಂಗಳೂರು ವರೆಗಿನ ಕಾಲ್ನಡಿಗೆ ಜಾಥಾಕ್ಕೆ ಸುರಪುರದಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.
ಸುರಪುರ ನಗರದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿ ಸ್ವಾಗತ ಕೋರಿ ಈ ಸಂದರ್ಭದಲ್ಲಿ ಜಾತಕದಲ್ಲಿ ಭಾಗವಹಿಸಿದ್ದ ಮುಖಂಡರು ಮಾತನಾಡಿ, ಬೆಂಗಳೂರಿನ ಗ್ರಾಮಾಂತರ ನಗರದಲ್ಲಿ 200 ಮೀಟರ್ ಎತ್ತರದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಯನ್ನು ನಿರ್ಮಿಸಬೇಕು, ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಅಂಬೇಡ್ಕರ್ ಭವನಕ್ಕಾಗಿ ಎರಡು ಎಕರೆ ಜಾಗ ಮೀಸಲಿಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿದರು.
ಸುರಪುರಕ್ಕೆ ಸ್ವಾಗತ ಕೋರಿದ ಮಾಳಪ್ಪ ಕಿರದಳ್ಳಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿ ಮಾತನಾಡಿ, ಭೀಮ ಪ್ರಜಾ ಸಂಘ ಹಮ್ಮಿಕೊಂಡಿರುವ ಕಾಲ್ನಡಿಗೆ ಜಾಥಾಕ್ಕೆ ಸುರಪುರ ತಾಲೂಕಿನ ಎಲ್ಲಾ ಅಂಬೇಡ್ಕರ್ ಅವರ ಅಭಿಮಾನಿಗಳು ಬೆಂಬಲವನ್ನು ವ್ಯಕ್ತಪಡಿಸಿ ಈ ಎಲ್ಲ ಬೇಡಿಕೆಗಳನ್ನು ಸರಕಾರ ಈಡೇರಿಸಬೇಕು ಎಂದು ನಾವುಗಳು ಕೂಡ ಒತ್ತಾಯಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಾಥಾದ ನೇತೃತ್ವ ವಹಿಸಿದ್ದ ಮುರುಗೇಶ್ ವೈಟ್‌ಫಿಲ್ಡ್ ಬೆಂಗಳೂರು, ಎ ಜಿ ಕೃಷ್ಣಮೂರ್ತಿ ಆರ್ ಆರ್ ನಗರ, ಚಂದಪ್ಪ ಪಂಚಮ್, ವೈಜನಾಥ ಹೊಸಮನಿ, ಶಂಕ್ರಪ್ಪ ಶಾಖನವರ್, ಶರಣಪ್ಪ ತಳವಾರಗೇರಾ, ಹಣಮಂತ ತೇಲ್ಕರ್, ಶಾಹಿದ್ ರಂಗಂಪೇಟೆ, ಇಬ್ರಾಹಿಂ ರಂಗಂಪೇಟೆ, ವಿಶ್ವನಾಥ ಹೊಸಮನಿ, ಶೇಖರ್ ಜೀವಣಿಗಿ, ಜೋಯಿಫ್ ರಂಗಂಪೇಟೆ, ಲಕ್ಷ್ಮಣ ಸುರಪುರಕರ್, ನಾಗರಾಜ ಬೆಂಗಳೂರು, ಶಶಾಂಕ್ ಬಂತೆ, ಗಜ ಬೆಂಗಳೂರು, ರಾಕೇಶ್ ಉತ್ತರ ಪ್ರದೇಶ ಸೇರಿದಂತೆ ಅನೇಕರು ಭಾಗವಹಿಸಿದ್ದರು.