ಯಾದಗಿರಿ | ಗುಣರಂಜನ್ ಶೆಟ್ಟಿ ಅವರ ಜನುಮ ದಿನದ ಅಂಗವಾಗಿ ಅನ್ನ ದಾಸೋಹ ಕಾರ್ಯಕ್ರಮ

Update: 2025-03-20 19:17 IST
ಯಾದಗಿರಿ | ಗುಣರಂಜನ್ ಶೆಟ್ಟಿ ಅವರ ಜನುಮ ದಿನದ ಅಂಗವಾಗಿ ಅನ್ನ ದಾಸೋಹ ಕಾರ್ಯಕ್ರಮ
  • whatsapp icon

ಸುರಪುರ: ಜಯ ಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಗುಣರಂಜನ್ ಶೆಟ್ಟಿ ಜನ್ಮದಿನಾಚರಣೆ ಅಂಗವಾಗಿ ಸಂಘಟನೆ ಸುರಪುರ ತಾಲೂಕು ಹಾಗೂ ಜಿಲ್ಲಾ ಘಟಕದ ದಿಂದ ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ಅನ್ನ ದಾಸೋಹ ಕಾರ್ಯಕ್ರಮ ನಡೆಸಲಾಯಿತು .

 ಈ ಸಂದರ್ಭದಲ್ಲಿ ಸುರಪುರ ಪೋಲಿಸ್ ಠಾಣೆ ಪಿ.ಎಸ್.ಐ ಶರಣಪ್ಪ ಹವಾಲ್ದಾರ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶರೆಡ್ಡಿ ತುಳೇರ ಭಾಗವಹಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ರವಿ ನಾಯಕ ಬೈರಿಮರಡಿ ಮಾತನಾಡಿ,ಜಯ ಕರ್ನಾಟಕ ಜನಪರ ವೇದಿಕೆ ಕೇವಲ ಹೋರಾಟ ಮಾತ್ರವಲ್ಲದೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.ಅದರಂತೆ ನಮ್ಮ ಸಂಘದ ಸಂಸ್ಥಾಪಕರ ಜನುಮ ದಿನದ ಅಂಗವಾಗಿ ದಾಸೋಹ ನಡೆಸುವ ಮೂಲಕ ಅವರಿಗೆ ವಿಶೇಷವಾಗಿ ಶುಭ ಹಾರೈಸುವುದಾಗಿ ತಿಳಿಸಿದರು.

ತಾಲೂಕು ಅಧ್ಯಕ್ಷ ಗೋಪಾಲ ನಾಯಕ ಸತ್ಯಂಪೇಟ್ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಪುರಸಭೆ ಸದಸ್ಯ ವೆಂಕಟೇಶ ನಾಯಕ ಶುಕ್ಲಾ, ದೇವು ನಾಯಕ ಜಾಲಿಬೆಂಚಿ, ಮೌನೇಶ ದಳಪತಿ,ವೆಂಕಟೇಶ ನಾಯಕ (ಡಿಸಿ) ಬಿಚಗತ್ತಿಕೇರ, ಹುಲಿರಾಜ್ ಹುಲಕಲ್,ಕೃಷ್ಣ ಸತ್ಯಂಪೇಟ್, ರಾಘವೇಂದ್ರ ಲಕ್ಷ್ಮೀಪುರ,ಭೀಮಣ್ಣ ಲಕ್ಷ್ಮೀಪುರ,ಮರೆಪ್ಪ ಕಾಟಮಳ್ಳಿ,ಬಸಪ್ಪ ಯಾಳವಾರ, ಮರೆಪ್ಪ ಕೂಮಾರಿ,ಸಂತು ನಾಯಕ ,ಭೀಮಣ್ಣ ಶುಕ್ಲಾ,ಭಾಗಣ್ಣ ಗೌಡಗೇರಾ.ಯ,ಶಿವು ನಾಯಕ ಕಿರದಹಳ್ಳಿ,ನಿಂಗಪ್ಪ ನಾಯಿಕೋಡಿ,ಖಾದರ್ ಹುಸೇನ್, ಶಿವಣ್ಣ ಕುಂಬಾರಪೇಟ್, ಪರಶುರಾಮ ಮೇದಾಗಲ್ಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News