ಯಾದಗಿರಿ ರೈಲ್ವೆ ನಿಲ್ದಾಣದಿಂದ ಹಾದು ಹೋಗುವ ಎಲ್ಲಾ ರೈಲುಗಳನ್ನು ನಿಲ್ಲಿಸುವಂತೆ ಕರವೇ ಮನವಿ

ಯಾದಗಿರಿ : ದಕ್ಷಿಣ ಕೇಂದ್ರ ರೈಲ್ವೆ ಸಿಕಂದರಬಾದ ವಿಭಾಗ ಪ್ರಧಾನ ವ್ಯವಸ್ಥಾಪಕ ಅವರು, ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ಸಮಯದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ಟಿ.ಎನ್.ಭೀಮುನಾಯಕ ಅವರ ನೇತೃತ್ವದಲ್ಲಿ ರೈಲ್ವೆ ನಿಲ್ದಾಣದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮನವಿ ಪತ್ರ ಸಲ್ಲಿಸಿದರು.
ಗುಂತಕಲ್ ವಿಭಾಗದಲ್ಲಿ ಯಾದಗಿರಿ ರೈಲ್ವೆ ನಿಲ್ದಾಣವು ಅತೀ ಹೆಚ್ಚು ಜನರ ಸಂಚಾರವುಳ್ಳ ಸ್ಟೇಷನ್ ಆಗಿದ್ದು, ಹೆಚ್ಚು ಆದಾಯ ಕೊಡುವ ಸ್ಟೇಷನ್ ಆಗಿದೆ. ಜಿಲ್ಲೆಯಾಗಿ ಸುಮಾರು 15ವರ್ಷ ಕಳೆದರು ಕೂಡ ರೈಲ್ವೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ.
ನಮ್ಮ ಭಾಗದ ಜನಪತ್ರಿನಿಧಿಗಳು ಕೇಳದ ಕಾರಣ ಜಿಲ್ಲೆಯ ಜನರಿಗೆ ದುರಂತವಾಗಿರುತ್ತದೆ, ರೈಲ್ವೆ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಜೊತೆಗೆ ಹಿರಿಯ ನಾಗರೀಕರಿಗೆ ಬ್ಯಾಟರಿ ಚಾಲಿತ ವಾಹನಗಳನ್ನು ನಿಲ್ದಾಣದ ಆವರಣದಲ್ಲಿ ಪ್ರಾರಂಭ ಮಾಡಬೇಕು ಎಂದರು
ನಂತರ ಮಾತನಾಡಿ ಅವರು, ಈಗಾಗಲೇ ಕೇಂದ್ರ ಸರ್ಕಾರವು ಯಾದಗಿರಿ ಮಾಹತ್ವಾಂಕ್ಷೆ ಜಿಲ್ಲೆಯೆಂದು ಘೋಷಣೆ ಮಾಡಿರುತ್ತಾರೆ, ಈ ರೈಲ್ವೆ ನಿಲ್ದಾಣದಿಂದ ಹಾದು ಹೋಗುವ, ರೈಲುಗಳಾದ ಪದ್ಮಾವತಿ ಎಕ್ಸ್ ಪ್ರೆಸ್, ರಾಜಕೋಟ್ ಎಕ್ಸ್ ಪ್ರೆಸ್, ದ್ವಾರಕಾ ಎಕ್ಸ್ ಪ್ರೆಸ್, ವಾಸ್ಕೋ ಎಕ್ಸ್ ಪ್ರೆಸ್, ಏಕ್ತಾನಗರ ಎಕ್ಸ್ ಪ್ರೆಸ್, ಸಾಯಿನಗರ ಶಿರಡಿ, ಅಹ್ಮದಾಬಾದ್ ಎಕ್ಸ್ ಪ್ರೆಸ್, ಮಧುರೈ ಎಕ್ಸ್ ಪ್ರೆಸ್, ತಿರುಪತಿ ಹಮ್‌ಸಫರ್ ಎಕ್ಸ್ ಪ್ರೆಸ್, ಗೋರಖಪುರ ಎಕ್ಸ್ ಪ್ರೆಸ್, ಅಹ್ಮದಾಬಾದ್ ಹಮ್ ಸಫರ್ ಎಕ್ಸ್ ಪ್ರೆಸ್, ಮತ್ತು ಗೋರಖಪುರ ಎಕ್ಸ್ ಪ್ರೆಸ್, ಸೇರಿ ವಾರದ ಹಾಗೂ ದಿನನಿತ್ಯ ಸಂಚರಿಸುವ ರೈಲುಗಳಾಗಿದ್ದು ಇವುಗಳು ನಿಲುಗಡೇಯಾಗದೇ ಜಿಲ್ಲೆಯ ಜನರಿಗೇ ಬೆಸರತಂದಿರುತ್ತದೆ, ಆದ ಕಾರಣ ತಾವುಗಳು ಈ ಮೇಲೀನ ರೈಲುಗಳು ರೈಲ್ವೆ ನಿಲ್ದಾಣದಲ್ಲಿ ನಿಲ್ಲಿಸುವಂತೆ ಸೂಚಿಸಬೇಕೆಂದು ತಿಳಿಸಿದರು.
ಕೋವಿಡ್ ಸಮಯದಲ್ಲಿ ಬಂದ್ ಮಾಡಿರುವ ಸೊಲ್ಲಾಪುರ ರಾಯಚೂರು ಇಂಟರಸಿಟಿ ರೈಲು ಪುನಾರಂಭಿಸಬೇಕು. ಮತ್ತು ಬಹುದಿನಗಳ ಈ ಭಾಗದ ಜನರ ಬೇಡಿಕೆಯಾದ ಕಲ್ಬುರ್ಗಿಯಿಂದ ಬೆಂಗಳೂರು ಹೋಗುವ ಸೂಪರ್ ಫಾಸ್ಟ್ ಪ್ಯಾಸಿಂಜರ್ ರೈಲು ಕೂಡಲೇ ಪ್ರಾರಂಭ ಮಾಡಬೇಕು, ಕಲಬುರಗಿ ರೈಲ್ವೆ ವಿಭಾಗ ಕಛೇರಿಯೆಂದು ಘೋಷಣೆಯಾಗಿ ನೆನೆಗುದಿಗೆ ಬಿದ್ದಿದ್ದು, ಕೂಡಲೇ ಪ್ರಾರಂಭ ಮಾಡಬೇಕೆಂದು ಆಗ್ರಹಿಸಿದರು.
ದಕ್ಷಿಣ ಗುಂತಕಲ್ ವಿಭಾಗದಲ್ಲಿ ಬರುವ ಯಾದಗಿರಿ ರೈಲ್ವೆ ಒಂದು ದಿನಕ್ಕೆ 5-6 ಲಕ್ಷಕ್ಕಿಂತ ಹೆಚ್ಚು ಆದಾಯ ಬರುತ್ತೀರುವುದರಿಂದ, ಯಾದಗಿರಿ ರೈಲ್ವೆ ನಿಲ್ದಾಣವು ಸಿ ದರ್ಜೆ ಹೊಂದಿರುವ ನಿಲ್ದಾಣವನ್ನು ಕೂಡಲೇ ಬಿ ಗ್ರೇಡ್ ಮೇಲ್ದರ್ಜೆಗೆ ಏರಿಸಿಬೇಕು. ಈ ಮೇಲಿನ ಎಲ್ಲಾ ವಿಷಯಗಳ ಬಗ್ಗೆ ಕ್ರಮ ಕೈಗೊಳ್ಳದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುತ್ತದೆಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಅಂಬ್ರೇಶ ಹತ್ತಿಮನಿ, ಶರಣಪ್ಪ ದಳಪತಿ ಶೆಟ್ಟಗೇರಾ, ಸಾಹೇಬಗೌಡ ನಾಯಕ ಗೌಡಗೇರಾ, ಹಣಮಂತ ಅಚ್ಚೋಲಾ, ಪ್ರಕಾಶ ಪಾಟೀಲ ಜೈಗ್ರಾಮ್, ಸುರೇಶ ಬೆಳಗುಂದಿ, ಸೈದಪ್ಪ ಬಾಂಬೆ, ಸಾಗರ ಹುಲ್ಲೇರ್, ಅನೀಲ ದಾಸನಕೇರಿ, ಮಲ್ಲು ಬಾಡಿಯಾಳ, ವಿಜಯ ರಾಠೋಡ್, ಮಹೇಶ ಸೈದಾಪೂರ, ಮಹೇಶ ಜೈಗಾರ್, ನಾಗರಾಜ ಶೆಟ್ಟಗೇರಾ, ರಮೇಶ.ಡಿ.ನಾಯಕ, ಹಾಗೂ ಅನೇಕ ಕಾರ್ಯಕರ್ತರರು ಭಾಗಿಯಾಗಿದ್ದರು.