ಯಾದಗಿರಿ | ಯುವಕರು ರಾಜಕೀಯದತ್ತ ಸಾಗದೇ ಸ್ವಯಂ ಉದ್ಯೋಗದತ್ತ ಸಾಗಲು ಭೀಮುನಾಯಕ್ ಕರೆ
Update: 2025-03-22 18:24 IST

ಯಾದಗಿರಿ : ಯುವಕರು ರಾಜಕೀಯ ಕ್ಷೇತ್ರದ ಕಡೆ ಹೋಗುವ ಬದಲಿಗೆ ಸ್ವಯಂ ಉದ್ಯೋಗ ಮಾಡಿಕೊಂಡು ಬೆಳೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎನ್.ಭೀಮುನಾಯಕ್ ಸಲಹೆ ನೀಡಿದರು.
ಕರವೇ ಜಿಲ್ಲಾ ಕಚೇರಿಯಲ್ಲಿ ಕರವೇಗೆ ಸೇರ್ಪಡೆಯಾದ ಜನಾರ್ಧನ ಬಡಿಗೇರ ಚಾಮನಳ್ಳಿ ಇವರಿಗೆ ಬರಮಾಡಿಕೊಂಡು ತಾಲ್ಲೂಕು ನೂತನ ಯುವ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿ ಆದೇಶ ಪತ್ರ ವಿತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಶರಣು ದಳಪತಿ ಶೆಟ್ಟಿಗೇರಾ, ರವಿ ಜಮ್ಮಾರ, ಅಶೋಕ ನಾಯಕ, ನಾಗರಾಜ ಪಿಲ್ಲಿ, ರಮೇಶ ಡಿ. ನಾಯಕ ಸೇರಿದಂತೆ ಕರವೇ ಮುಖಂಡರು ಕಾರ್ಯಕರ್ತರು ಇದ್ದರು.