ಯಾದಗಿರಿ | ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಬಸ್ ಗಳ ಸೌಲಭ್ಯ ಕಲ್ಪಿಸಲು ಪ್ರಯತ್ನ: ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು

ಯಾದಗಿರಿ : ಬರುವ ದಿನಗಳಲ್ಲಿ ಎಲ್ಲ ಗ್ರಾಮಗಳಲ್ಲಿ ಬಸ್ ಗಳ ಸೌಲಭ್ಯ ಕಲ್ಪಿಸಲಾಗುವುದೆಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ತಮ್ಮ ಮತ ಕ್ಷೇತ್ರದ ವಡಗೇರಾದಲ್ಲಿ ಮಂಗಳವಾರ ಕೆಕೆಆರ್ ಟಿಸಿಯ ವಡಗೇರಾ ದಿಂದ ಹೈದರಾಬಾದಿಗೆ ನೂತನ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾರಿಗೆ ವ್ಯವಸ್ಥೆಯಿಂದ ಜನರು ಅನೇಕ, ಕಾರ್ಯಗಳು ಸುಗಮವಾಗಿ ಸಾಗುತ್ತವೆ. ದೂರದ ಊರುಗಳಿಂದ ತಮಗೆ ಬೇಕಾದ ವಸ್ತುಗಳ ಖರೀದಿ, ಶಾಲಾ, ಕಾಲೇಜು ಮತ್ತು ಅಸ್ಪತ್ರೆಯಂತಹ ಕೆಲಸಗಳಿಗೂ ಸಾರಿಗೆ ವ್ಯವಸ್ಥೆ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಜನರಿಗೆ ಬೇಕಾದ ಅಗತ್ಯ ಬಸ್ ಗಳ ಸಂಚಾರಕ್ಕೆ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದೆಂದರು.
ಬಸ್ ಸಂಚಾರಕ್ಕೆ ಮುಖ್ಯವಾಗಿ ಉತ್ತಮ ರಸ್ತೆಗಳು ಬೇಕು. ಅದನ್ನು ಸಹ ಸರ್ಕಾರ ಮತ್ತು ಕೆಕೆಆರ್ ಡಿಬಿಯಿಂದ ಕಲ್ಪಿಸಲಾಗುವುದೆಂದರು.
ಈ ಸಂದರ್ಭದಲ್ಲಿ ಕೆಕೆಆರ್ ಟಿಸಿ ಯಾದಗಿರಿ ವಿಭಾಗದ ಡಿಸಿ ಸುನೀಲಕುಮಾರ ಚಂದರಗಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಚ್ಚಮರಡ್ಡಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮರೆಪ್ಪ ಬಿಳ್ಹಾರ್, ಮೋಹಿನೋದ್ದಿನ್ ಮಿರ್ಚಿ, ಭಾಷುಮಿಯಾ ವಡಗೇರಾ, ಬಸವರಾಜ ನೀಲಳ್ಳಿ, ವಿಜಯಕುಮಾರ ದೊರೆ, ಮಲ್ಲಪ್ಪ ಮಗನೂರ, ಮೊನುದ್ದಿನ್ ದೇವದುರ್ಗ, ಸಂಗನಗೌಡ ಮಾಲಿಪಾಟೀಲ್, ಶಿವರಾಜ್ ಬಾಗುರು, ಶಿವಕುಮಾರ ಕರದಳ್ಳಿ ಸೇರಿದಂತೆಯೇ ಇತರರಿದ್ದರು.