ಯಾದಗಿರಿ | ಉಪವಾಸದಿಂದ ಮನಸ್ಸು, ದೇಹ ಶುದ್ದಿಯಾಗುತ್ತದೆ : ರಾಜಾ ವೇಣುಗೋಪಾಲ ನಾಯಕ್‌

Update: 2025-03-26 21:38 IST
ಯಾದಗಿರಿ | ಉಪವಾಸದಿಂದ ಮನಸ್ಸು, ದೇಹ ಶುದ್ದಿಯಾಗುತ್ತದೆ : ರಾಜಾ ವೇಣುಗೋಪಾಲ ನಾಯಕ್‌
  • whatsapp icon

ಸುರಪುರ: ನಗರದ ಬಡಿ ಮಸೀದಿಯಲ್ಲಿ ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ನದೀಮುಲ್ಲಾ ಹುಸೇನಿ ಇನಾಮದಾರವರು ಆಯೋಜಿಸಿರುವ ಇಫ್ತಾರ್‌ ಕೂಟದಲ್ಲಿ ಶಾಸಕರಾದ ರಾಜಾ ವೇಣುಗೋಪಾಲ ನಾಯಕ್‌ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಪವಿತ್ರ ರಮಝಾನ್‌ ಮಾಸದಲ್ಲಿ ಉಪವಾಸವಿರುವುದರಿಂದ ಮನಸ್ಸು ಮತ್ತು ದೇಹ ಶುದ್ದಿಯಾಗುವುದರ ಜೊತೆಗೆ ದಾನ ಧರ್ಮ ಮಾಡುವುದು ರಮಝಾನ್‌ ಹಬ್ಬದ ವಿಶೇಷತೆ, ಈ ಪವಿತ್ರ ಮಾಸದಲ್ಲಿ ಸರ್ವರಿಗೂ ಒಳ್ಳೆಯದಾಗಲಿ ಎಂದರು.  

ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿಠ್ಠಲ್ ಯಾದವ್, ಪ್ರಮುಖರಾದ ವೆಂಕೋಬ ಯಾದವ್, ರಾಜಾ ಸುಶಾಂತ ನಾಯಕ, ಹಣಮಂತರಾಯ ಮಕಾಶಿ, ನಗರಸಭೆ ಸದಸ್ಯರಾದ ಮಹಬೂಬ್ ಖುರೇಷಿ, ಶಕೀಲಹಮ್ಮದ್ ಖುರೇಶಿ, ಮೌಲಾಲಿ ಸೌದಾಗರ್, ಅಬ್ದುಲ್ ಖಾದರ್ ಲೈನ್ ಪೀರ್, ಚಿನ್ನುಪಟೇಲ್, ಅಹಮದ್ ಖುರೇಷಿ, ಖಾಜಾಹುಸೇನ ಗುಡಗುಂಟಿ, ಅಬ್ಬಾಸ್  ಹಾಗೂ ಬಡಿ ಮಸೀದಿಯ ಅನೇಕ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News