ಯಾದಗಿರಿ | ಕೃಷ್ಣಾ ಎಡದಂಡೆ ಕಾಲುವೆಗೆ ನೀರು ಹರಿಸಲು ಮುಖ್ಯಮಂತ್ರಿಗಳಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ್ ಮನವಿ

ಸುರಪುರ : ಕೃಷ್ಣಾ ಎಡದಂಡೆ ಕಾಲುವೆಗಳಿಗೆ ಏ.10 ರವರೆಗೆ ನಿರಂತರವಾಗಿ ನೀರು ಹರಿಸಲು ಕ್ರಮ ಕೈಗೊಂಡು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಾಸಕ ರಾಜಾ ವೇಣುಗೋಪಾಲ ನಾಯಕ್ ಮನವಿ ಮಾಡಿದರು.
ಕೃಷ್ಣಾ ಎಡದಂಡೆ ಕಾಲುವೆ ಭಾಗದ ರೈತರ ಜಮೀನಿನಲ್ಲಿಯ ಬೆಳೆಗಳಿಗೆ ಇನ್ನೂ ನೀರಿನ ಅಗತ್ಯವಿದ್ದು,ಏ.10ರ ವರೆಗೆ ನಿರಂತರವಾಗಿ ನೀರು ಹರಿಸಿದಲ್ಲಿ ರೈತರ ಬೆಳೆಗಳು ಕೈಗೆ ಬರುತ್ತವೆ, ಇಲ್ಲವಾದಲ್ಲಿ ಬೆಳೆಗಳು ಒಣಗಿ ಹೋಗುತ್ತವೆ. ಕೋಯ್ನಾ ಜಲಾಶಯದಿಂದ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ನೀರು ಹರಿಸಿಕೊಂಡು ಕೃಷ್ಣಾ ಎಡದಂಡೆ ಕಾಲುವೆಯ ಜಾಲಗಳಿಗೆ ಏ.10ರ ವರೆಗೆ ನಿರಂತರವಾಗಿ ನೀರು ಹರಿಸಲು ಸಂಬಂಧಿಸಿರುವ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮನವಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ವೆಂಕೋಬ ಯಾದವ್, ಮಾಜಿ ಜಿ.ಪಂ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್, ಚಂದ್ರಶೇಖರ ದಂಡಿನ್, ನಿಂಗಣ್ಣ ಬಾಚಿಮಟ್ಟಿ, ಗುಂಡಪ್ಪ ಸೋಲಾಪುರ, ಭೀಮರಾಯ ಮೂಲಿಮನಿ,ಎ.ಜಿ.ಕುಂಬಾರ, ತಿಮ್ಮಣ್ಣ ಮಿಂಚೇರಿ, ಶಾಂತಪ್ಪ ಬಾಕ್ಲಿ, ಕೃಷ್ಣಾ ಜಾಧವ್,ಶರಣು ಮುಧೋಳ, ಸಿದ್ದನಗೌಡ ಹಂದ್ರಾಳ, ಹಣಮಂತ್ರಾಯ ಮಕಾಶಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.