ಯಾದಗಿರಿ | ರಾಜ್ಯ ಸರಕಾರದ ದರ ಏರಿಕೆ ವಿರುದ್ಧ ಮುದ್ನಾಳ್ ನೇತೃತ್ವದಲ್ಲಿ ಪ್ರತಿಭಟನೆ

ಯಾದಗಿರಿ : ರಾಜ್ಯದಲ್ಲಿ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರಕಾರ ಈಗ ಪದೇ ಪದೇ ದರ ಏರಿಕೆ ಮಾಡಿ ಜನಸಾಮಾನ್ಯರಿಗೆ ಹೊರೆ ಮಾಡುತ್ತಿದ್ದು, ಇದರಿಂದ ಬಡಜನರು ಬದುಕು ಸಾಗಿಸುವುದು ಕಷ್ಟವಾಗಲಿದೆ. ಸರಕಾರ ಡಿಸೇಲ್ ,ಹಾಲಿನ ,ವಿದ್ಯುತ್ ದರ ಪರಿಶೀಲನೆ ಮಾಡಿ ದರ ಇಳಿಸಬೇಕೆಂದು ಒತ್ತಾಯಿಸಿ ಸಮಾಜಿಕ ಹೋರಾಟಗಾರ ಉಮೇಶ್ ಕೆ.ಮುದ್ನಾಳ ಅವರ ನೇತೃತ್ವದಲ್ಲಿ ಗಿರಿನಾಡು ಟ್ಯಾಕ್ಸಿ ಚಾಲಕರ ಸಂಘಟನೆಯು ಸುಭಾಷ್ ವೃತ್ತದ ಸಮೀಪದ ಕಣೇಕಲ್ ಪೆಟ್ರೋಲ್ ಬಂಕ್ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಉಮೇಶ್ ಕೆ,ಮುದ್ನಾಳ್ ಅವರು, ರಾಜ್ಯ ಸರಕಾರ ಕೂಡಲೇ ಎಲ್ಲಾ ಅಗತ್ಯ ವಸ್ತುಗಳ ದರ ಇಳಿಸಬೇಕು. ರಾಜ್ಯ ಸರಕಾರ ಹಾಲಿನ ದರ, ವಿದ್ಯುತ್ ದರ, ಪೆಟ್ರೋಲ್ ದರ ಏರಿಕೆ ಮಾಡಿ ಜನ ಸಾಮಾನ್ಯರಿಗೆ ಹೊರೆ ಮಾಡಿತ್ತು. ಈಗ ನಿನ್ನೆ ಏಕಾಎಕಿ ಡಿಸೇಲ್ ದರ ಹೆಚ್ಚಿಸಿ ದರ ಏರಿಕೆ ಶಾಕ್ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಟ್ಯಾಕ್ಸಿ ಚಾಲಕರ ಸಂಘದ ಉಪಾಧ್ಯಕ್ಷರ ಶರಣು ನಾರಾಯಣಪೇಟೆ, ಸಾಬಯ್ಯ ಗುತ್ತೇದಾರ್, ಗಣೇಶ್ ಯಾದಗಿರಿ, ಜಮಾಲ್ ಬಿಳರ್, ವೀರೇಶ್ ನೈಕಲ್, ವಹಬ್ ಪಾಶ, ಹಸನ್ ಉಲ್ಕಲ್, ವೆಂಕಟರೆಡ್ಡಿ ನೈಕಲ್, ಅಜೀಜ್, ರಿಯಾಜ್ ನೈಕಲ್, ಸಲೀಂ, ರಶೀದ್ ಪಾಷಾ ಕನಪುರ್, ನಾರಾಯಣ, ಮಲ್ಲಪ್ಪ, ರವಿ, ಜಗ್ಗು, ಚಂದ್ರು, ರವಿ ಖಾನಪುರ್, ಕೃಷ್ಣ ಖಾನಪುರ್, ಸುಭಾಷ್ ಕಾನಪುರ್ ಇದ್ದರು.