ಸಿರವಾರ | ಕ್ರೀಡಾಂಗಣಕ್ಕೆ ಜಮೀನು ಹಸ್ತಾಂತರಿಸಿದ ಶಾಸಕ ಜಿ.ಹಂಪಯ್ಯ ನಾಯಕರಿಗೆ ಸನ್ಮಾನ
Update: 2025-04-09 18:39 IST

ಸಿರವಾರ : ಯುವಕರ ಬಹುದಿನದ ಕನಸಾದ ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ನಡೆಯುತ್ತಿರುವ ಹೋರಾಟ, ಪ್ರಯತ್ನಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಫಲವಾಗಿ ಕೊನೆಗೂ ಜಯ ಸಿಕ್ಕಿದೆ.
ನೀರಾವರಿ ನಿಗಮದ ಹೆಸರಿನಲ್ಲಿದ್ದ ಉದ್ದೇಶಿತ ಕ್ರೀಡಾಂಗಣದ 8 ಎಕರೆ ಜಮೀನನ್ನು ಸಂಬಂಧಿಸಿದ ಕಂದಾಯ ಇಲಾಖೆಗೆ ಹಸ್ತಾಂತರ ಮಾಡಲು ಸರ್ಕಾರ ಆದೇಶಿಸಿದ್ದು, ಕ್ರೀಡಾಭಿಮಾನಿ ಯುವಕರಿಗೆ ಅತ್ಯಂತ ಹರ್ಷತಂದಿದೆ. ಯುವಕರೆಲ್ಲರೂ ಬುಧವಾರ ಶಾಸಕ ಜಿ.ಹಂಪಯ್ಯ ನಾಯಕ ಅವರನ್ನು ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ವೈ ಭೂಪನಗೌಡ, ಪ.ಪಂ ಸದಸ್ಯ ಸಂದೀಪ್ ಪಾಟೀಲ, ಮುಖಂಡರಾದ ರಮೇಶ ದರ್ಶನಕರ್, ಗಣೇಕಲ್ ವೀರೇಶ, ದೇವೇಗೌಡ ಖಾನಾಪುರ, ದೈಹಿಕ ಶಿಕ್ಷಣ ಶಿಕ್ಷಕ ಮಹಿಬೂಬ ಪಾಷ, ವಿನೋದ್ ಗೌಡ, ರಫಿ ಗುತ್ತೇದಾರ, ಚಿನ್ನಾನ ನಾಗರಾಜ,ಡಿ ಮೇಶಾಕ್, ನಾಗರಾಜ ನಾಯಕ ಹಾಗು ಇತರರು ಇದ್ದರು.