ಸುರಪುರ | ವಕೀಲರ ಸಂಘದಿಂದ ಡಾ.ಅಂಬೇಡ್ಕರ್ ಜಯಂತಿ ಆಚರಣೆ

Update: 2025-04-15 20:03 IST
Photo of Program
  • whatsapp icon

ಸುರಪುರ : ನಗರದ ನ್ಯಾಯಾಲಯದ ವಕೀಲರ ಸಂಘದ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲ ದೇವಿಂದ್ರಪ್ಪ ಬೇವಿನಕಟ್ಟಿ ಮಾತನಾಡಿ, ಬಾಲ್ಯದಲ್ಲಿ ಎಲ್ಲಾ ಅವಮಾನಗಳನ್ನು ಸಹಿಸಿಕೊಂಡು ಉನ್ನತ ಶಿಕ್ಷಣ ಪಡೆದು, ಮನುಷ್ಯರನ್ನು ಮನುಷ್ಯರಂತೆ ಕಾಣದ ಸಮಾಜದಲ್ಲಿ ಅಸ್ಪೃಶ್ಯತೆ ಆಚರಣೆ ವಿರುದ್ಧ ತಮ್ಮ ಜೀವವನ್ನೆ ಪಣಕಿಟ್ಟು ಸಮಾನತೆಗಾಗಿ ಹೋರಾಡಿದ ಮಹಾನಾಯಕ ಅಂಬೇಡ್ಕರ್ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅಪರ ಸರಕಾರಿ ವಕೀಲ ನಂದನಗೌಡ ಪಾಟೀಲ್, ಹಿರಿಯ ವಕೀಲ ಅಪ್ಪಾಸಹೇಬಗೌಡ ಪಾಟೀಲ್, ಯಂಕಾರಡ್ಡಿ ಹವಲ್ದಾರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಕೀಲರಾದ ಜಿ.ಆರ್.ಬನ್ನಾಳ, ಯಲ್ಲಪ್ಪ ಹುಲಿಕಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಕೀಲರಾದ ಆದಪ್ಪ ಹೊಸ್ಮನಿ, ಗೋಪಾಲ ತಳವಾರ, ಎ.ವೆಂಕಟೇಶ, ಅಪ್ಪಣ್ಣ ಗಾಯಕವಾಡ, ವಿಶ್ವಮಿತ್ರ ಕಟ್ಟಿಮನಿ, ಶಿವನಂದ ಆವಂಟಿ, ಆನಂದರಡ್ಡಿ ಪಾಟೀಲ್, ಭೀಮಾಶಂಕರಬಡಿಗೇರ, ಪ್ರಕಾಶ ಕಟ್ಟಿಮನಿ, ಶರಣಬಸವ ಅನಸೂರ, ಮಂಜುನಾತ ಗುಡಗುಂಟಿ, ಮಲ್ಲಯ್ಯ ನಾಯಕ ಸೇರಿದಂತೆ ಅನೇಕರು ಭಾಗವಹಿಸಿದ್ದರು. ವಕೀಲ ನಂದಕುಮಾರ ಕನ್ನೆಳ್ಳಿ ಸ್ವಾಗತಿಸಿ, ನಿರೂಪಿಸಿದರು, ಭೀಮಣ್ಣ ಹೊಸ್ಮನಿ ಮುದನೂರ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News