ಯಾದಗಿರಿ | ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿಗೆ ಡಿಸಿ ಸೂಚನೆ

ಡಾ.ಸುಶೀಲಾ ಬಿ.
ಯಾದಗಿರಿ : ಜಿಲ್ಲೆಯ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶವನ್ನು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಹೊರಡಿಸಿದ್ದಾರೆ.
ಪ್ರಕ್ರಿಯೆ ಬಿ.ಎನ್.ಎಸ್.ಎಸ್ 2023ರ ಕಲಂ 163 ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ 2025ರ ಎ.15 ರಿಂದ 21ರ ವರೆಗೆ ಮೌಲ್ಯಮಾಪನ ಪ್ರಕ್ರಿಯೆಯು ಸುಸೂತ್ರವಾಗಿ ನಡೆಸುವ ದೃಷ್ಟಿಯಿಂದ ಮೌಲ್ಯಮಾಪನ ಕೇಂದ್ರಗಳ ಸುತ್ತಮುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿದೆ.
ಮೌಲ್ಯಮಾಪನ ಕೇಂದ್ರಗಳು :
ಸರ್ಕಾರಿ ಪ್ರೌಢ ಶಾಲೆ ಸ್ಟೇಷನ್ ಬಜಾರ್ ಆರ್.ಟಿ.ಒ ಕಚೇರಿ ಹತ್ತಿರ ಯಾದಗಿರಿ ( ವಿಷಯ ಸಂಕೇತ 01ಕೆ), ಡಾನ್ ಬೋಸ್ಕೋ ಪ್ರೌಢ ಶಾಲೆ 2ನೇ ಮಹಡಿ ಚಿತ್ತಾಪೂರ ರಸ್ತೆ, ಯಾದಗಿರಿ(ವಿಷಯ ಸಂಕೇತ 31ಇ), ಡಾನ್ ಬೋಸ್ಕೋ ಹಿರಿಯ ಪ್ರಾಥಮಿಕ ಶಾಲೆ 1ನೇ ಮಹಡಿ ಚಿತ್ತಾಪೂರ ರಸ್ತೆ ಯಾದಗಿರಿ (ವಿಷಯ ಸಂಕೇತ 61ಹೆಚ್), ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು (ಪ್ರೌಢ ವಿಭಾಗ) ಕೆಳ ಮಹಡಿ ಯಾದಗಿರಿ (ವಿಷಯ ಸಂಕೇತ 81 ಇಕೆ), ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು (ಪ್ರೌಢ ವಿಭಾಗ) 1ನೇ ಮಹಡಿ, ಯಾದಗಿರಿ (ವಿಷಯ ಸಂಕೇತ 83ಇಕೆ), ಆರ್.ವಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಲಕ್ಷ್ಮೀ ನಗರ ಗ್ರಾಮೀಣ ಪೊಲೀಸ್ ಸ್ಟೇಷನ್ ರೋಡ ಯಾದಗಿರಿ (ವಿಷಯ ಸಂಕೇತ 85 ಇಕೆ) ನಡೆಯಲಿದೆ.
ಷರತ್ತುಗಳು :
ಮಾಲ್ಯಮಾಪನ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮೊಬೈಲ್, ಪೇಜರ್, ಝೆರಾಕ್ಸ್, ಟೈಪಿಂಗ್, ಪುಸ್ತಕ ಮಳಿಗೆಗಳು ಮುಂತಾದವುಗಳನ್ನು ನಿಷೇಧಿಸಲಾಗಿದೆ.
ಮೌಲ್ಯಮಾಪನ ಕೇಂದ್ರಗಳಲ್ಲಿ ನಿಗದಿಪಡಿಸಿದ ಅಧಿಕಾರಿಗಳನ್ನು, ಶಿಕ್ಷಕರನ್ನು ಹೊರತುಪಡಿಸಿ ಇನ್ನೂಳಿದವರಿಗೆ ಪರವಾನಿಗೆ ಇಲ್ಲದೇ ಮೌಲ್ಯಮಾಪನ ಕೇಂದ್ರದಲ್ಲಿ ಪ್ರವೇಶ ಮಾಡುವದನ್ನು ನಿಷೇಧಿಸಲಾಗಿದೆ.
200 ಮೀಟರ್ ಮೌಲ್ಯಮಾಪನ ಕೇಂದ್ರದ ಸುತ್ತಲೂ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವದನ್ನು ನಿಷೇಧಿಸಿದೆ.
ಮದುವೆ, ಶವ ಸಂಸ್ಕಾರಗಳು ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಈ ಆದೇಶ ಅನ್ವಯವಾಗುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.