ಯಾದಗಿರಿ | ಭೀಕರ ರಸ್ತೆ ಅಪಘಾತ: ನಾಲ್ವರು ಮೃತ್ಯು, 12 ಮಂದಿಗೆ ಗಾಯ
Update: 2025-04-11 10:12 IST

ಸಾಂದರ್ಭಿಕ ಚಿತ್ರ
ಯಾದಗಿರಿ: ಕೆಎಸ್ಸಾರ್ಟಿಸಿ ಬಸ್ ಮತ್ತು ಮಹಿಂದ್ರಾ ಬೊಲೇರೊ ವಾಹನದ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಘಟನೆ ಶಹಾಪುರ ತಾಲೂಕಿನ ಮದ್ರಿಕಿ ಕ್ರಾಸ್ ಬಳಿ ಗುರುವಾರ ರಾತ್ರಿ ಸಂಭವಿಸಿದೆ.
ಈ ಅಪಘಾತದಲ್ಲಿ ಇತರ 12 ಮಂದಿ ಗಾಯಗೊಂಡಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಿಂದ್ರಾ ಬೊಲೇರೊ ಚಾಲಕ ಶರಣಪ್ಪ (26), ಸುನೀತಾ(30), ಸೋಮವ್ವ (45) ಹಾಗೂ ತಂಗವ್ವ (32) ಮೃತಪಟ್ಟವರು ಎಂದು ತಿಳಿದುಬಂದಿದೆ.
ಮಹಿಂದ್ರಾ ಬೊಲೇರೊದಲ್ಲಿದ್ದವರು ಶಹಾಪುರದಿಂದ ಕಲಬುರಗಿಯ ಘತ್ತರಕಿಯ ದೇವಸ್ಥಾನಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ. ಸಾರಿಗೆ ಬಸ್ ಕಲಬುರಗಿಯಿಂದ ಆಗಮಿಸುತ್ತಿತ್ತು ಎನ್ನಲಾಗಿದೆ.