ಯಾದಗಿರಿ | ಎ.18 ರಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ

Update: 2025-04-15 19:25 IST
Photo of Press meet
  • whatsapp icon

ಸುರಪುರ : ಎ.18 ರಂದು ನಗರದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡರು ತಿಳಿಸಿದರು.

ನಗರದ ಡಾ.ಬಿ.ಆರ್ ಅಂಬೇಡ್ಕರ್ ಜಯಂತೋತ್ಸವ ಸಮಿತಿ ಝಂಡದಕೇರಾ ಮುಖಂಡರು ನಗರದ ಪತ್ರಿಕಾ ಭವನದಲ್ಲಿ ಸುದ್ದೊಗೋಷ್ಠಿ ನಡೆಸಿ ಮಾತನಾಡಿ, ಕಾರ್ಯಕ್ರಮದ ಸಾನಿಧ್ಯವನ್ನು ವರಜ್ಯೋತಿ ಬಂತೇಜಿ ವಹಿಸಲಿದ್ದು, ಕಾರ್ಯಕ್ರಮದಲ್ಲಿ ವಿಶೇಷ ಅಹ್ವಾನಿತರಾಗಿ ಸುರಪುರ ಅರಸು ಮನೆತನದ ಡಾ.ರಾಜಾ ಕೃಷ್ಣಪ್ಪ ನಾಯಕ ಆಗಮಿಸಲಿದ್ದಾರೆ. ಶಾಸಕ ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸುವರು, ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ವೈಜನಾಥ ಹೊಸ್ಮನಿ ವಹಿಸುವರು. ವಿಶೇಷ ಭಾಷಣಕಾರರಾಗಿ ಜೇವರ್ಗಿಯ ಡಾ.ನಿಜಲಿಂಗ ದೊಡ್ಡಮನಿ ಹಾಗೂ ಬೆಂಗಳೂರಿನ ಹೈಕೋರ್ಟ್ ವಕೀಲರಾದ ಭೀಮಪುತ್ರಿ ಸಾವಿತ್ರಿ ಮಾತನಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಹೆಚ್.ಎ.ಸರಕಾವಸ್, ಡಿವೈಎಸ್ಪಿ ಜಾವಿದ್ ಇನಾಂದಾರ್, ಸರಕಾವಸ್ ಟಿಹೆಚ್‌ಓ ಡಾ.ಆರ್.ವಿ.ನಾಯಕ, ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಾ ಕುಮಾರ ನಾಯಕ,ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹ್ಮದ್ ಸಲೀಂ, ಕೆಪಿಸಿಸಿ ರಾಜ್ಯ ಪ್ರ.ಕಾರ್ಯದರ್ಶಿ ವಿಠ್ಠಲ್ ಯಾದವ್, ವೆಂಕೋಬ ಯಾದವ್, ಸೂಗುರೇಶ ವಾರದ್, ಮಾನು ಗುರಿಕಾರ, ಮಲ್ಲಿಕಾರ್ಜುನ ಕ್ರಾಂತಿ, ತಿಪ್ಪಣ್ಣ ಸುರಪುರ, ಶಿವಕುಮಾರ ಕಟ್ಟಿಮನಿ, ಮಾನಪ್ಪ ಕರಡಕಲ್, ಆದಪ್ಪ ಹೊಸಮನಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ರಾಜು ಕಟ್ಟಿಮನಿ, ಅಧ್ಯಕ್ಷ ವೈಜನಾಥ ಹೊಸ್ಮನಿ, ಉಪಾಧ್ಯಕ್ಷರಾದ ಗಿರೀಶ ಶಾಖಾನವರ್, ಆಕಾಶ ಕಟ್ಟಿಮನಿ, ಪ್ರ.ಕಾರ್ಯದರ್ಶಿ ಲಚಮಪ್ಪ ಸುರಪುರಕರ್, ಸಹ ಕಾರ್ಯದರ್ಶಿ ನಾಗಲಿಂಗ ಹುಲಿಕಲ್, ಖಜಾಂಚಿ ಮನೋಹರ ಜೀವಣಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸುದ್ದಿಗೋಷ್ಠಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮದ ಭಿತ್ತಿ ಪತ್ರ ಹಾಗೂ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಎಲ್ಲರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸಮಿತಿಯಿಂದ ಮನವಿ ಮಾಡುತ್ತೇವೆ ಎಂದು ಸಮಿತಿ ಅಧ್ಯಕ್ಷ ವೈಜನಾಥ ಹೊಸಮನಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News