ನೀರು ಬಿಡದಿದ್ದರೆ ನಾಳೆ ಯಾದಗಿರಿ ಬಂದ್ : ಮಾಜಿ ಸಚಿವ ರಾಜುಗೌಡ ಎಚ್ಚರಿಕೆ

ಶಹಾಪುರ : ಇಂದು ಸಂಜೆಯೊಳಗೆ ನೀರು ಬಿಡುವ ನಿರ್ಧಾರ ಕೈಗೊಳ್ಳಬೇಕು, ಇಲ್ಲವಾದರೇ ನಾಳೆ ಯಾದಗಿರಿ ಬಂದ್ ಮಾಡಲಾಗುವುದು ಎಂದು ಮಾಜಿ ಸಚಿವ ರಾಜುಗೌಡ ಎಚ್ಚರಿಸಿದ್ದಾರೆ.
ಶಹಾಪುರ ಸಮೀಪದ ಭೀ.ಗುಡಿ ಸರ್ಕಲ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಡೆದ ಪಕ್ಷಾತೀತ ಹೊರಾಟದಲ್ಲಿ ಮಾತನಾಡಿದ ಅವರು, ನೀರು ಬೀಡುವವರೆಗೂ ಹೋರಾಟ ನಿಲ್ಲಿಸುವ ಮಾತೇ ಇಲ್ಲ. ಬೆಂಗಳೂರಿಗೆ ಹೋಗುವ ಅಗತ್ಯವಿಲ್ಲ, ಜಿಲ್ಲೆಯ ಮೂವರು, ನೆರೆಯ ಜೇರ್ವಗಿ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕಿದರೇ ನೀರು ತಾನಾಗಿಯೇ ಹರಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮಾಜಿ ಅಧ್ಯಕ್ಷ ಅಮೀನ್ ರಡ್ಡಿ ಯಾಳಗಿ, ಹಾಲಿ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಕಲಬುರಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೆವಾಡಗಿ, ಕರವೇ ಅಧ್ಯಕ್ಷ ಟಿ.ಎನ್.ಭೀಮು ನಾಯಕ್, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ರೈತ ಮುಖಂಡ ಮಹೇಶ ಸುಬೇದಾರ ಸೇರಿದಂತೆಯೇ ಅನೇಕರು ಮಾತನಾಡಿದರು.
ಯಾದಗಿರಿ ಜಿಲ್ಲೆ, ದೇವದುರ್ಗ ಮತ್ತು ಜೇರ್ವಗಿ ತಾಲೂಕಿನಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ರಸ್ತೆ ತಡೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ಮಾಡಿದ್ದರು.
ಈ ಸಂದರ್ಭದಲ್ಲಿ ರಾಜ ಹಣಮಂತ ನಾಯಕ, ಬಸವರಾಜ ಸ್ಥಾವರಮಠ, ಬಸನಗೌಡ ಯಾಡಿಯಾಪುರ, ಯಲ್ಲಪ್ಪ ಕುರುಕುಂದಿ, ಸುರೇಶ್ ಸಜ್ಜನ್, ವೀರೆಶ ಸಾಹುಕಾರ ಹುಣಸಗಿ, ಶೋಭಾ ಬಾಣಿ, ಬಿ.ಎಮ್.ಹಳ್ಳಿಕೊಟಿ, ಸಿದ್ದನಗೌಡ ಕರಿಭಾವಿ, ಚಂದ್ರಶೇಖರ ಮಾಗನೂರು, ದೇವಿಂದ್ರಪ್ಪ ಕೊನೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ ಮತ್ತು ಮೆಲಪ್ಪ ಗುಳುಗಿ ಹಾಗೂ ಪರುಶುರಾಮ ಕುರಕುಂದಿ, ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಜಾಕ,ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜ ಹನುಮಂತ ನಾಯಕ, ಸಿದ್ದಣ್ಣ ಗೌಡ, ಶಿವರಾಜ ದೆಶಮುಖ, ರಾಜಶೇಖರ್ ಗೂಗಲ್, ರಾಜಶೇಖರ್ ಕಾಡಂನೊರ, ಚಂದ್ರಶೇಖರ ಯಾಳಗಿ, ಶಹಾಪುರ ಗ್ರಾಮೀಣ ಮಂಡಲ ಅಧ್ಯಕ್ಷ ತಿರುಪತಿ ಹತಿಕಟಿಗಿ,ರಾಜುಗೌಡ ಉಕ್ಕಿನಾಳ, ಹಯಳ್ಳಪ್ಪ ಆಚಾರ್ಯ ಜೇವರ್ಗಿ, ಸೇರಿದಂತೆ ವಿವಿಧ ಸಂಘಟನೆಗಳು ಪದಾಧಿಕಾರಿಗಳ ಉಪಸ್ಥಿತರಿದ್ದರು.