ಯಾದಗಿರಿ | ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಜೋಳ ಖರೀದಿ ಕೇಂದ್ರ ಆರಂಭ : ಡಾ.ಸುಶೀಲಾ ಬಿ.

Update: 2025-03-29 17:26 IST
ಯಾದಗಿರಿ | ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಜೋಳ ಖರೀದಿ ಕೇಂದ್ರ ಆರಂಭ : ಡಾ.ಸುಶೀಲಾ ಬಿ.

ಡಾ.ಸುಶೀಲಾ ಬಿ.

  • whatsapp icon

ಯಾದಗಿರಿ : 2024-25ನೇ ಸಾಲಿನ ಹಿಂಗಾರು (RABI) ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಭತ್ತ ಮತ್ತು ಜೋಳ ಖರೀದಿಸಲು ರೈತರ ನೋಂದಣಿ ಕೇಂದ್ರ ಆರಂಭಿಸಿದೆ ಎಂದು ಯಾದಗಿರಿ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ತಿಳಿಸಿದ್ದಾರೆ.

ಹಿಂಗಾರು (RABI) ಋತುವಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ-ಸಾಮಾನ್ಯ ಪ್ರತಿ ಕ್ವಿಂಟಾಲ್ 2,300 ರೂ.ಗಳ ಹಾಗೂ ‘ಎ’ ಗ್ರೇಡ್ ಪ್ರತಿ ಕ್ವಿಂಟಾಲ್‌ಗೆ 2,320 ರೂ.ಗಳ ರಂತೆ ಮತ್ತು ಬಿಳಿ ಜೋಳ ಹೈಬ್ರಿಡ್ ಪ್ರತಿ ಕ್ವಿಂಟಾಲ್‌ಗೆ 3,371 ರೂ.ಗಳ ಹಾಗೂ ಬಿಳಿ ಜೋಳ ಮಾಲ್ದಂಡಿ ಪ್ರತಿ ಕ್ವಿಂಟಾಲ್‌ಗೆ 3,421 ರೂ.ಗಳ ಖರೀದಿಸಲು ಈ ಕೆಳಕಂಡ ತಾಲ್ಲೂಕು ಕೇಂದ್ರಗಳಲ್ಲಿ ನೊಂದಣಿ ಕೇಂದ್ರ ತೆರೆಯಲಾಗಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಯಾದಗಿರಿ, (ನೊಂದಣಿ ಕೇಂದ್ರ), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ, ಸುರಪೂರ ಸಗಟು ಮಳಿಗೆ, ವೆಂಕಟಾಪುರ, (ನೋಂದಣಿ ಕೇಂದ್ರ), ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ, ಆವರಣ ಶಹಾಪೂರ, (ನೋಂದಣಿ ಕೇಂದ್ರ), ತಾಲ್ಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ, ಟಿ.ಎ.ಪಿ.ಸಿ.ಎಂ.ಎಸ್. ಆವರಣ (ಮಹಾದೇವಪ್ಪ ಬಳೆ ಕಲ್ಯಾಣ ಮಂಟಪ ಎದುರುಗಡೆ, ತಾಳಿಕೋಟೆ ರಸ್ತೆ), (ನೋಂದಣಿ ಕೇಂದ್ರ) ಹುಣಸಗಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ನಾಯ್ಕಲ್ ಗ್ರಾಮ, (ನೋಂದಣಿ ಕೇಂದ್ರ), ಕೃಷಿ ಇಲಾಖೆಯವರು ಸಿದ್ದಪಡಿಸಿದ ಫ್ರೂಟ್ ಎಂಬ ತಂತ್ರಾಂಶದಲ್ಲಿ ನಮೂದಿಸಿರುವ ಬೆಳೆಯ ಆಧಾರದ ಮೇಲೆ ರೈತರ ಹೆಸರನ್ನು ನೊಂದಾಯಿಸಿಕೊಳ್ಳಲಾಗುವುದು, ಒಂದು ವೇಳೆ ಫ್ರೂಟ್ ತಂತ್ರಾಂಶದಲ್ಲಿ ತೊಂದರೆ ಇದ್ದಲ್ಲಿ ಹತ್ತಿರವಿರುವ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ತಂತ್ರಾಂಶದಲ್ಲಿ ಸರಿಪಡಿಸಿಕೊಂಡು ನೊಂದಣಿ ಮಾಡಿಕೊಳ್ಳಬೇಕು.

ಮಾರ್ಗ ಸೂಚಿಸಗಳು : ಭತ್ತವನ್ನು ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಾಲ್‌ನಂತೆ ಪ್ರತಿ ರೈತರಿಂದ ಗರಿಷ್ಟ 50 ಕ್ವಿಂಟಾಲ್ ಖರೀದಿಸುವುದು. ಪ್ರತಿ ರೈತರಿಂದ ಪ್ರತಿ ಎಕರೆಗೆ 20 ಕ್ವಿಂಟಾಲ್‌ನಂತೆ ಪ್ರತಿ ರೈತರಿಂದ ಗರಿಷ್ಟ 150 ಕ್ವಿಂಟಾಲ್ ಬಿಳಿ ಜೋಳವನ್ನು ಖರೀದಿಸುವುದು. ಭತ್ತವನ್ನು ರೈತರು ಅವರ ಚೀಲಗಳಲ್ಲಿ ತಂದು ಖರೀದಿ ಕೇಂದ್ರಗಳಿಗೆ ಸಲ್ಲಿಸಿದಾಗ ಪ್ರತಿ ಕ್ವಿಂಟಾಲ್ ಚೀಲಕ್ಕೆ 6 ರೂ.ಗಳು ರಂತೆ ಖರೀದಿ ಏಜೆನ್ಸಿಗಳು ರೈತರಿಗೆ ಪಾವತಿಸಬೇಕು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ಭತ್ತ ಖರೀದಿಸ ಬೇಕಾಗಿರುವುದರಿಂದ ರೈತ ಭಾಂದವರು ನೊಂದಣಿ ಕೇಂದ್ರಗಳಲ್ಲಿ 2025ರ ಮಾ.20 ರಿಂದ ಏ.25ರ ವರೆಗೆ ನೊಂದಣಿ ಮಾಡಿಕೊಳ್ಳಲಾಗುವುದು ಹಾಗೂ 2025ರ ಏ.1 ರಿಂದ ಮೇ 31ರ ವರೆಗೆ ಭತ್ತ, ಬಿಳಿ ಜೋಳ ಖರೀದಿಸಲಾಗುವುದು ಜಿಲ್ಲೆಯ ರೈತ ಭಾಂದವರು ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯನ್ನು ಸದುಪಯೋಗ ಪಡೆದುಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ಆಹಾರ ನಾಗರಿಕ ಸರಬರಾಜು ನಿಗಮ ನಿಯಮಿತ ದೂ.ಸಂ. 9844600893, ತಾಲ್ಲೂಕು ಖರೀದಿ ಕೇಂದ್ರಗಳ ಮೇಲ್ವಿಚಾರಕರುಗಳಾದ ಯಾದಗಿರಿ ತಾಲ್ಲೂಕು ವಿಠ್ಠಲ್ ಬಂದಾಳ ಮೊ.ನಂ. 8971236664, ಶಹಾಪೂರ ತಾಲ್ಲೂಕು ಬಸವರಾಜ ಪತ್ತಾರ ಮೊ.ನಂ. 8861819836, ಸುರಪುರ ತಾಲ್ಲೂಕು ಆದಯ್ಯ ಹಿರೇಮಠ ಮೊ.ನಂ: 8660813747, ಹುಣಸಗಿ ತಾಲ್ಲೂಕು ಸಿ.ಎಸ್.ರಾಜು ಮೊ.ನಂ 9632659336, ನಾಯ್ಕಲ್ ಹೋಬಳಿ ನಯೀಮ ಅಹ್ಮದ್ ಮೊ.ನಂ 6361852251 ಇವರನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News