ಯಾದಗಿರಿ |ಬಸನಗೌಡ ಪಾಟೀಲ್ ಯತ್ನಾಳ್ ಅವರ ಉಚ್ಛಾಟನೆ ಸರಿಯಲ್ಲ; ಸಚಿನ್ ಕುಮಾರ್ ನಾಯಕ
Update: 2025-03-27 19:59 IST

ಸುರಪುರ : ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಉಚ್ಛಾಟನೆ ಮಾಡಿರುವುದು ಸರಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸಚಿನ್ ಕುಮಾರ್ ನಾಯಕ ಬಿಜೆಪಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಇಂದು ಫಯರ್ ಬ್ರ್ಯಾಂಡ್ ಎಂದೇ ಕರೆಯಲಾಗುತ್ತದೆ, ಅಸಂಖ್ಯಾತ ಯುವಕರಿಗೆ ಮಾದರಿಯಾಗಿದ್ದಾರೆ. ಅಂತವರನ್ನು ಪಕ್ಷ ಉಚ್ಚಾಟನೆ ಮಾಡುವ ಮೂಲಕ ಇಂದು ಅಭಿಮಾನಿಗಳಿಗೆ ಘಾಸಿ ಉಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.