ಯಾದಗಿರಿ | ಎಲ್.ಜಿ.ಹಾವನೂರ ಅವರು ಹಿಂದುಳಿದ ವರ್ಗಗಳ ನಾಯಕರಾಗಿದ್ದರು : ಸಿದ್ದಲಿಂಗಪ್ಪ ನಾಯಕ

ಯಾದಗಿರಿ : ಹಿಂದುಳಿದ ವರ್ಗಗಳ ಹರಿಕಾರ, ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹರಿಕಾರ ಸಮಾನತೆಯ ಪ್ರತಿಪಾದಕರು, ಹಿಂದುಳಿದ ವರ್ಗಗಳ ಪಿತಾಮಹ ಕಾನೂನು ಪಂಡಿತ್ ಎಲ್.ಜಿ.ಹಾವನೂರು ಅವರು ಎಂದು ಯಾದಗಿರಿ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಪ್ರದಾನ ಕಾರ್ಯದರ್ಶಿ ನಿವೃತ್ತ ತಹಶೀಲ್ದಾರ್ ಅವರು ಹೇಳಿದರು.
ಇಂದು ನಡೆದ ನಗರದ ವಾಲ್ಮೀಕಿ ಭವನದಲ್ಲಿ ಎಲ್.ಜಿ.ಹಾವನೂರ ಅವರ ಜಯಂತಿ ಅಂಗವಾಗಿ ಅವರ ಭಾವಚಿತ್ರ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ವಾಲ್ಮೀಕಿ ಜನಾಂಗದಲ್ಲಿ ಪ್ರಪ್ರಥಮವಾಗಿ ಕಾನೂನು ಪದವೀಧರರಾಗಿದ್ದು, ಹಾವನೂರರ ಹೆಗ್ಗಳಿಕೆ ಸಾಮಾಜಿಕ ನ್ಯಾಯದ ಹರಿಕಾರ ನಾಯಕ ಜನಾಂಗದ ಭೀಷ್ಮನೆಂದೇ ಕರೆಯಲ್ಪಡುತ್ತಿದ್ದ ಕಾನೂನು ಪಂಡಿತ ವಾಲ್ಮೀಕಿ ಜನಾಂಗದಲ್ಲಿ ಪ್ರಪ್ರಥಮವಾಗಿ ಕಾನೂನು ಪದವಿದರರಾಗಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಯಾದಗಿರಿ ತಾಲೂಕು ಅಧ್ಯಕ್ಷರಾದ ಸಾಹೇಬಗೌಡ ನಾಯಕ ಗೌಡಗೇರ. ವಾಲ್ಮೀಕಿ ಸಮಾಜದ ಮುಖಂಡರಾದ ದೊಡ್ಡಯ್ಯ ನಾಯಕ್ ಹಳಗೇರಾ. ಶರಣಪ್ಪ ಜಾಕ್ನಳ್ಳಿ. ಬಸವರಾಜ ಗೊಂದೇನೊರ. ಸಿದ್ದಪ್ಪ ಕೂಯಿಲೂರು ಕಾಶಪ್ಪ ದೊರೆ .ದೊಡ್ಡಪ್ಪ ನಾಯಕ . ರೋಹಿತ್ ಹುಲಿ ನಾಯಕ್. ಗುರುರಾಜ್ ಬಗಲಿ. ಮೋನಪ್ಪ ಯಾದಗಿರಿ. ಲಕ್ಷ್ಮಣ ನಾಯಕ ಜಿನಕೇರಿ .ಅಂಬಣ್ಣ ಇತರರು ಭಾಗವಹಿಸಿದ್ದರು.