ಯಾದಗಿರಿ | ತಂದೆಯ ನಿಧನದ ನೋವಿನ ಮಧ್ಯೆಯೂ ಎಸೆಸೆಲ್ಸಿ ಪರೀಕ್ಷೆ ಬರೆಯಲು ಹೋದ ವಿದ್ಯಾರ್ಥಿ
Update: 2025-03-26 11:24 IST

ಶ್ರೀಶೈಲ
ಯಾದಗಿರಿ: ತಂದೆಯ ನಿಧನದ ನೋವಿನ ಮಧ್ಯೆಯೂ ವಿದ್ಯಾರ್ಥಿಯೊರ್ವ ಎಸೆಸೆಲ್ಸಿ ಪರೀಕ್ಷೆ ಬರೆಯಲು ಹೋ ಘಟನೆ ಜಿಲ್ಲೆಯ ಕಂಚಗಾರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ತಡ ರಾತ್ರಿ 11 ಗಂಟೆಗೆ ಸುಮಾರಿಗೆ ಹೃದಯಾಘಾತದಿಂದ ಶ್ರೀಶೈಲ ಅವರ ತಂದೆ ಮಲ್ಲಪ್ಪ (50) ಮೃತಪಟ್ಟಿದ್ದರು.
ಬೆಳಗಾದರೆ ತನ್ನ ಜೀವನ ಭವಿಷ್ಯದ ಎಸೆಸೆಲ್ಸಿ ಪರೀಕ್ಷೆ ಒಂದೆಡೆಯಾದರೆ, ಶ್ರೀಶೈಲನಿಗೆ ತಂದೆಯ ಸಾವಿನ ದುಃಖ ಮತ್ತೊಂದಡೆಯಾಗಿದೆ. ಇಂತಹ ಕಷ್ಟದ ನಡುವೆ ವಿದ್ಯಾರ್ಥಿ ಶ್ರೀಶೈಲ ಎಸೆಸೆಲ್ಸಿ ಪರೀಕ್ಷೆ ಬರೆಯಲು ಪರೀಕ್ಷೆ ಕೇಂದ್ರ ಯರಗೋಳ ಗ್ರಾಮಕ್ಕೆ ತೆರಳಿದ್ದಾನೆ ಎಂದು ತಿಳಿದು ಬಂದಿದೆ