ಯಾದಗಿರಿ | ವಿಶೇಷ ಚೇತನರನ್ನು ಪ್ರೀತಿಯಿಂದ ಆರೈಕೆ ಮಾಡಿ : ಸಚಿನಕುಮಾರ್

ಸುರಪುರ : ನಗರದಲ್ಲಿ ಎಪಿಡಿ ಸಂಸ್ಥೆ ವತಿಯಿಂದ ವಿಶೇಷ ಚೇತನರಿಗೆ ಅಗತ್ಯ ಉಪಕರಣಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಜೀಮ್ ಪ್ರೇಮಜೀ ಫೌಂಡೇಷನ್ ಜಿಲ್ಲಾ ಸಂಯೋಜಕ ಸಚಿನಕುಮಾರ್ ಸಾಲಕ್ಕಿ ಮಾತನಾಡಿ, ವಿಶೇಷ ಚೇತನರನ್ನು ಪ್ರೀತಿಯಿಂದ ಆರೈಕೆ ಮಾಡುವುದರ ಜೊತೆಗೆ ಈ ಸಂಸ್ಥೆಯಲ್ಲಿ ಸಿಗುವ ಎಲ್ಲಾ ಸೌಲಭ್ಯವನ್ನು ಪಡೆದುಕೊಂಡು ನಿಮ್ಮ ಮಕ್ಕಳನ್ನು ಸ್ವಾಲಂಬಿಗಳಾಗಿಸಿ ಎಂದು ಪಾಲಕರಲ್ಲಿ ವಿನಂತಿಸಿಕೊಂಡರು.
ಸಂಸ್ಥೆಯ ತಾಲೂಕು ಸಂಯೋಜಕ ಗೀರಿಶ ಕುಲ್ಕರ್ಣಿ ಮಾತನಾಡಿ, ಎಪಿಡಿ ಸಂಸ್ಥೆಯು ಕಳೆದ ಮೂರು ವರ್ಷಗಳಿಂದ ಅಜೀಮ್ ಪ್ರೇಮಜೀ ಫೌಂಡೇಷನ್ ಧನಸಹಾಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿಶೇಷ ಚೇತನರಿಗೆ ಅವಶ್ಯವಿರುವ ಸಾಧನ ಸಲಕರಣೆಗಳು ಹಾಗೂ ಅಗತ್ಯವಿರುವ ಮಾರ್ಗದರ್ಶನ ನೀಡುತ್ತಿದೆ ಪಾಲಕರು ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಅಜೀಮ್ ಪ್ರೇಮಿಜೀ ಪೌಂಡೇಷನ್ ಸಂಪನ್ಮೂಲ ವ್ಯಕ್ತಿ ಅನ್ವರ ಜಮಾದಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಿಸಿಯೋಥೆರಪಿಸ್ಟ ಶರಣಬಸಮ್ಮ , ಸುರಪುರದ ವಿವಿಧ ಗ್ರಾಮಗಳಿಂದ ವಿಶೇಷ ಚೇತನ ಫಲಾನುಭವಿಗಳು ಹಾಗೂ ಎಪಿಡಿ ಸಂಸ್ಥೇಯ ಸಿಬಂದ್ಧಿಗಳು ಭಾಗವಹಿಸಿದ್ದರು.