ರಂಗಂಪೇಟ | ಅರುಂಧತಿ ಕಾನೂನು ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ

ಸುರಪುರ : ನಗರದ ರಂಗಪೇಟೆಯ ಅರುಂಧತಿ ಕಾನೂನು ಮಹಾವಿದ್ಯಾಲಯದಲ್ಲಿ ಕಾಲೇಜು ಹಾಗೂ ಆರೋಗ್ಯ ಇಲಾಖೆಯ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ನಡೆಸಲಾಯಿತು.
ತಾಲೂಕು ಆರೋಗ್ಯ ಅಧಿಕಾರಿ ಡಾ.ಆರ್.ವಿ.ನಾಯಕ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಇದರಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ. ಹೃದಯಾಘಾತ ತಡೆಯಲಿದೆ, ರಕ್ತ ಉತ್ಪತ್ತಿ ಹಾಗೂ ರಕ್ತದೊತ್ತಡದಂತ ಕಾಯಿಲೆಗಳನ್ನು ಕಡಿಮೆಗೊಳಿಸುತ್ತದೆ. ಆದ್ದರಿಂದ ಇಂದು ಅರುಂಧತಿ ಕಾನೂನು ಮಹಾವಿದ್ಯಾಲಯದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೈಲಾರ ಲಿಂಗೇಶ್ವರ ಸ್ನಾತಕೋತ್ತರ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಮಲ್ಲಿಕಾರ್ಜುನ ಕುಲಕರ್ಣಿ ಭಾಗವಹಿಸಿ ರಕ್ತದಾನ ಮಾಡಿದರು.
ಅಧ್ಯಕ್ಷತೆಯನ್ನು ಮಲ್ಲಪ್ಪ ಜೇವರ್ಗಿ ವಹಿಸಿಕೊಂಡಿದ್ದರು, ವೇದಿಕೆಯ ಮೇಲೆ ಪ್ರಿಯದರ್ಶಿನಿ ಕಾಲೇಜಿನ ಪ್ರಾಂಶುಪಾಲರಾದ ನಿಂಗಣ್ಣ ಹೆಗ್ಗಣದೊಡ್ಡಿ, ಆರೋಗ್ಯ ಇಲಾಖೆ ಸಿದ್ಧಲಿಂಗರೆಡ್ಡಿ, ಸುರೇಶ್ ಖಾದಿ, ಹಾಗೂ ಅಂಬೇಡ್ಕರ್ ಅನುದಾನಿತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಂಗಾಧರ ರುಮಾಲ್,ರೇಣುಕಾ ಕನಕಗಿರಿ ಇದ್ದರು.
ಕಾರ್ಯಕ್ರಮದಲ್ಲಿ ಅರುಂಧತಿ ಕಾಲೇಜಿನ ಉಪನ್ಯಾಸಕರಾದ ಜಕ್ಕಯ್ಯ ,ಲಕ್ಷ್ಮಿಶ್ ಹಾಗೂ ಮೌನೇಶ್ ಹಾವಿನಾಳ, ಅಂಬರೀಶ್ ಡೊಣ್ಣಿಗೇರಿ ಭಾಗವಹಿಸಿದ್ದರು. 35 ಜನರು ರಕ್ತದಾನ ಮಾಡಿದರು.