ಯಾದಗಿರಿ | ಮದುವೆಯಾಗುವುದೆಂದು ನಂಬಿಸಿ ಅತ್ಯಾಚಾರ ಆರೋಪ : ದೂರು ದಾಖಲು

ಯಾದಗಿರಿ : ವಿಧವೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
ಮಾಳಪ್ಪ ಪೂಜಾರಿ ಅತ್ಯಾಚಾರ ಎಸಗಿದ ಆರೋಪಿ ಎಂದು ಗುರುತಿಸಲಾಗಿದೆ.
ಯಾದಗಿರಿ ತಾಲೂಕಿನ ಬಸಂತಪುರ ಗ್ರಾಮದ ಸುವರ್ಣಾ ಎಂಬ ಮಹಿಳೆ ವಂಚನೆಗೊಳಗಾಗಿದ್ದು, ತಡಿಬಿಡಿ ಗ್ರಾಮದ ಮಾಳಪ್ಪ ಪೂಜಾರಿ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದು, ಬಳಿಕ ಲಕ್ಷಾಂತರ ರೂ. ಬೆಲೆ ಬಾಳುವ ಜಮೀನನ್ನು ಮಾರಿ ಹಣವನ್ನು ವಂಚಿಸಿದ್ದಾನೆ ಎಂದು ಆರೋಪಿಸಿರುವ ಮಹಿಳೆ ಯಾದಗಿರಿ ಎಸ್ಪಿ ಕಚೇರಿ ಎದುರು ಡಿಸೇಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕಳೆದ ಹತ್ತು ವರ್ಷದ ಹಿಂದೆ ಸುವರ್ಣ ಅವರ ಪತಿ ನಿಧನರಾಗಿದ್ದು, ತನಗಿರುವ ಕಷ್ಟದ ಬಗ್ಗೆ ಅಬ್ಬೆತುಮಕೂರಿನ ಸ್ವಾಮೀಜಿ ಬಳಿ ಅಳಲು ತೋಡಿಕೊಂಡಿದ್ದಳು. ಅದೇ ಅಬ್ಬೆತುಮಕೂರು ಮಠದಲ್ಲೇ ಮಾಳಪ್ಪ ಪೂಜಾರಿಯ ಪರಿಚಯವಾಗಿದೆ. ನಂತರ ಮಾಳಪ್ಪ ಹಾಗೂ ಸುವರ್ಣಾ ನಡುವೆ ಸಂಪರ್ಕ ಬೆಳೆದಿದ್ದು, ಮದುವೆಯಾಗುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕವನ್ನು ಬೆಳೆಸಿದ್ದಾನೆ ಎಂದು ಸುವರ್ಣ ಅವರು ಆರೋಪಿಸಿದ್ದಾರೆ.
ಅಲ್ಲದೇ ಸುವರ್ಣಾ ಅವರು ತೆಲಂಗಾಣದ ನಾರಾಯಣಪೇಟದಲ್ಲಿ 4 ಎಕರೆ ಜಮೀನನ್ನು ಹೊಂದಿದ್ದರು. ನಂತರ ಮದುವೆಯಾಗೊಣ ಎಂದು ನಂಬಿಸಿ ಲಕ್ಷಾಂತರ ರೂ. ಬೆಲೆ ಬಾಳುವ ಜಮೀನನ್ನು ಮಾರಿ ಹಣ ತೆಗೆದುಕೊಂಡು ಮಾಳಪ್ಪ ವಂಚಿಸಿದ್ದಾನೆ ಎಂದು ಸುವರ್ಣ ತಿಳಿಸಿದ್ದಾರೆ.
ಈ ಸಂಬಂಧ ಶಹಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದೀಗ ವಂಚನೆಗೊಳಗಾದ ಮಹಿಳೆ ಎಸ್ಪಿ ಕಚೇರಿಗೆ ಡಿಸೇಲ್ ಬಾಟಲ್ ಸಮೇತ ಬಂದಿದ್ದು, ನ್ಯಾಯ ಸಿಗದಿದ್ದರೆ ಡೀಸೆಲ್ ಸುರಿದುಕೊಂಡು ಸಾಯುತ್ತೇನೆಂದು ಕಣ್ಣೀರು ಹಾಕಿದ್ದಾರೆ. ಮಾಳಪ್ಪ ಪೂಜಾರಿ ವಿರುದ್ಧ ಕೇಸ್ ದಾಖಲು ಆದರೂ ಇನ್ನೂ ಅವರನ್ನು ಬಂಧಿಸಿಲ್ಲ, ಕೂಡಲೇ ಬಂಧಿಸಿ ನನಗೆ ನ್ಯಾಯ ಕೊಡಿ ಎಂದು ಆರೋಪಿಸಿದ್ದಾಳೆ.