ಯಾದಗಿರಿ | 134ನೇ ಅಂಬೇಡ್ಕರ್ ಜಯಂತೋತ್ಸವದ ಅಧ್ಯಕ್ಷರಾಗಿ ಶಿವುಕುಮಾರ್ ಗಿರಿಪ್ಪನೋರ್ ಆಯ್ಕೆ

Update: 2025-03-20 16:57 IST
Photo of Program
  • whatsapp icon

ಯಾದಗಿರಿ : ಕೋಟೆಗಾರವಾಡ ನಗರದಲ್ಲಿ ಭೋದಿ ಸತ್ವ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತೋತ್ಸವದ ಅಂಗವಾಗಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು, ಸಭೆಯ ಅಧ್ಯಕ್ಷತೆಯನ್ನು ಮಾಜಿ ಅಧ್ಯಕ್ಷರಾದ ತಾಯಪ್ಪ ಭಂಡಾರಿ ಅವರು ವಹಿಸಿದರು.

ನಗರದ ಹಿರಿಯ ಮುಖಂಡರಾದ ಚಂದಪ್ಪ ಮುನಿಯಪ್ಪನವರ್, ಚಂದ್ರಕಾಂತ್ ಮುನಿಯಪ್ಪನೂರ್, ಸೈದಪ್ಪ ಕೂಲೂರ್, ನಗರದ ಹಿರಿಯ ಕಿರಿಯರು ಸರ್ವನುಮತದಿಂದ 134 ನೇ ಅಂಬೇಡ್ಕರ್ ಜಯಂತೋತ್ಸವದ ಅಧ್ಯಕ್ಷರನ್ನಾಗಿ ಶಿವಕುಮಾರ್ ಗಿರೆಪ್ನೋರ ಹಾಗೂ ಗೌರವ ಅಧ್ಯಕ್ಷರನ್ನಾಗಿ ಸೈದಪ್ಪ ಕೂಲೂರಕರ್, ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸುರೇಶ ನಾಯಕ್, ಬಸಪ್ಪ ಗಿರಿಪ್ಪನೋರ್, ಆಂಜನೇಯ ಕೌಳೂರ್, ಮಲ್ಲಪ್ಪ ಹಳ್ಳಿ, ಬಸಪ್ಪ ಕಾಂಚಗಾರಳ್ಳಿ, ತಿಪ್ಪಣ್ಣ ಹಳಿಗೇರಿ, ಬಸಪ್ಪ ಅರಿಕೇರಿ, ಮಂಜುನಾಥ ಹಳ್ಳಿ,ರಾಹುಲ್ ಕೊಲ್ಲೂರಕರ್,ರಮೇಶ್ ಕ್ಯಾತ್ನಾಳ್, ಅನೇಕರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News