ಯಾದಗಿರಿ | ರಂಗ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಿಗೆ ಕಸಾಪ ವತಿಯಿಂದ ಸನ್ಮಾನ

ಯಾದಗಿರಿ : ಎ.3 ರಂದು ಕನ್ನಡ ಭವನ ಕಲಬುರಗಿ ಜಿಲ್ಲಾ ಕೇದ್ರದಲ್ಲಿ ಆಯೋಜಿಸಿದ ಕಲಬುರಗಿ ಜಿಲ್ಲಾ ಪ್ರಥಮ ರಂಗ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಶ್ರೀ ನಾಗಪ್ಪಯ್ಯ ಮಹಾಸ್ವಾಮಿಜಿಗಳಿಗೆ ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಲಾಯಿತು.
ಪೂಜ್ಯರಿಗೆ ಸನ್ಮಾನ ಮಾಡಿ ಮಾತನಾಡಿದ ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಪ್ಪ ಎಸ್.ಹೊಟ್ಟಿ ಅವರು, ಕೆಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಜಿಲ್ಲಾ ಹಾಗೂ ತಾಲೂಕು ಸಾಹಿತ್ಯ ಸಮ್ಮೇಳನಗಳು ಹಾಗೂ ದಲಿತ ಸಾಹಿತ್ಯ ಸಮ್ಮೇಳನ ಯುವ ಸಮ್ಮೇಳನಗಳು ನಡೆಸಿಕೊಂಡು ಬಂದಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಮೊದಲು ಬಾರಿಗೆ ರಂಗ ಸಾಹಿತ್ಯ ಸಮ್ಮೇಳನ ಆಯೊಜಿಸಿದ ಕೀರ್ತಿ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಚಿತ್ತಾಪೂರ ತಾಲೂಕಿನ ಅಳ್ಳೋಳ್ಳಿ ಗ್ರಾಮದ ಶ್ರೀ ಮಠವು ರಂಗ ಭೂಮಿ ಕಲಾವಿದರನ್ನು ಬೆಳಸಿದ ಕ್ಷೇತ್ರವಾಗಿದೆ. ಈ ಸುಕ್ಷೇತ್ರದ ಮಹಾತ್ಮಾ ಪೀಠ ಗದ್ದುಗೆ ಮಠ ಅಳ್ಳೋಳ್ಳಿ ಮಠದ ಪೂಜ್ಯ ಶ್ರೀ ನಾಗಪಯ್ಯ ಮಹಾಸ್ವಾಮಿಗಳನ್ನು ರಂಗ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರನ್ನಾಗಿ ಮಾಡಿದ್ದು ಕನ್ನಡ ಸಾಹಿತ್ಯ ಪರಿಷತ್ತಿಗೆ ಗೌರವ ಬಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶ್ಯಧ್ಯಕ್ಷ ಬಸವರಾಜ ಅರಳಿ ಮೋಟ್ನಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಯಾದಗಿರಿ ತಾಲೂಕು ಅಧ್ಯಕ್ಷರಾದ ವೆಂಕಟೇಶ ಕಲಕಂಭ, ದೇವರಾಜ ನಾಯಕ ವರ್ಕನಳ್ಳಿ, ಮಹೇಂದ್ರ ರೆಡ್ಡಿ ಇದ್ದರು.