ಶುದ್ಧವಾದ ಆಹಾರ ಸೇವನೆಯಿಂದ ಉತ್ತಮವಾದ ಆರೋಗ್ಯ ಹೊಂದಲು ಸಾಧ್ಯ : ಸದಾಶಿವ ಎಂ.ನಾರಾಯಣಕರ್

Update: 2024-11-13 11:42 GMT

ಯಾದಗಿರಿ : ಪ್ರತಿಯೊಬ್ಬ ವ್ಯಕ್ತಿಗೆ ಆಹಾರವೆಂದರೆ ಔಷಧಿ ಇದ್ದಂತೆ ಶುದ್ಧವಾದ ಆಹಾರ ಸೇವನೆಯಿಂದ ಉತ್ತಮವಾದ ಆರೋಗ್ಯ ಹೊಂದಲು ಸಾಧ್ಯವೆಂದು ಯಾದಗಿರಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸದಾಶಿವ ಎಂ.ನಾರಾಯಣಕರ್ ಅವರು ತಿಳಿಸಿದ್ದಾರೆ.

ನಗರದ ಗಂಜ್ ಏರಿಯಾದಲ್ಲಿರುವ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಸತಿ ನಿಲಯ ಮೇಲ್ವಿಚಾರಕರಿಗೆ ಮತ್ತು ಅಡುಗೆ ಸಿಬ್ಬಂದಿಯವರಿಗೆ ಆಹಾರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಸತಿ ನಿಲಯ ಮಕ್ಕಳಿಗೆ ಶುದ್ಧವಾದ ಆಹಾರವನ್ನು ಸಿದ್ಧಪಡಿಸಿ ನೀಡಬೇಕು ಎಂದು ನಿಲಯ ಮೇಲ್ವಿಚಾರಕರು ಮತ್ತು ಅಡುಗೆ ಸಿಬ್ಬಂದಿಗಳಿಗೆ ಹೇಳಿದರು. 

ಈ ಸಂದರ್ಭದಲ್ಲಿ ಯಾದಗಿರಿ ತಾಲ್ಲೂಕು ಆಹಾರ ಸುರಕ್ಷತೆ ಅಧಿಕಾರಿ ಆಂಜನೇಯ, ಯಾದಗಿರಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಂತೋಷರೆಡ್ಡಿ, ಯಾದಗಿರಿ ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಉಮಾರೆಡ್ಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Full View

 

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News