ಯಾದಗಿರಿ | ದೇವರಗೋನಾಲ ಗ್ರಾಮ ಪಂಚಾಯತ್ ಅವ್ಯವಹಾರ ಆರೋಪ : ಕರವೇ ದೂರು

Update: 2024-12-21 14:12 GMT

ಯಾದಗಿರಿ: ಸುರುಪುರ ತಾಲ್ಲೂಕಿನ ದೇವರಗೋನಾಲ ಗ್ರಾಮ ಪಂಚಾಯತಿಯಲ್ಲಿ 14 ಮತ್ತು 15ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿ ನಗರದ ತಾಲ್ಲೂಕು ಪಂಚಾಯತ್ ಕಚೇರಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಸಾರಥ್ಯದಲ್ಲಿ ಸಂಘಟನೆಯ ಕಲ್ಯಾಣ ಕರ್ನಾಟಕ ಘಟಕ ದಿಂದ ಪ್ರತಿಭಟನೆ ನಡೆಸಲಾಗಿದೆ.

ಸಂಘಟನೆಯ ಕಲ್ಯಾಣ ಕರ್ನಾಟಕ ಅಧ್ಯಕ್ಷ ಶಿವಮೋನಯ್ಯ ಎಲ್.ಡಿ.ನಾಯಕ ಮಾತನಾಡಿ, 14 ಮತ್ತು 15ನೇ ಸಾಲಿನ ಅನುದಾನದಲ್ಲಿ ಅವ್ಯವಹಾರ ನಡೆಸಲಾಗಿದೆ. ಡಿ.12 ರಂದು 5 ಲಕ್ಷ ರೂ. ಡ್ರಾ ಮಾಡಲಾಗಿದೆ ಎಂದು ಆರೋಪಿಸಿದರು. ಅಲ್ಲದೆ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳಲ್ಲೂ ಅವ್ಯವಹಾರ ನಡೆದಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ನಂತರ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘಟನೆ ತಾಲ್ಲೂಕು ಸಂಚಾಲಕ ಕೃಷ್ಣ ಪೂಜಾರಿ, ಸಾಯಬಣ್ಣ ಗುತ್ತೇದಾರ, ರಾಮಪ್ಪ ಕಟ್ಟಿಮನಿ, ಕುಶಪ್ಪ ಕಟ್ಟಿಮನಿ, ಮಾರ್ಥಂಡಪ್ಪ ಕಟ್ಟಿಮನಿ, ಬಾಲಪ್ಪ ಪೂಜಾರಿ, ನಿಂಗಪ್ಪ ಯಂಡಗಾರ, ಭೀಮಾಶಂಕರ ಕೊಡವಿಬೇವ, ಕಾಳಪ್ಪ ಕಿರಿಗುಡ, ನಾಗಪ್ಪ ಪೂಜಾರಿ, ಹಣಮಂತ ಪೂಜಾರಿ, ಮರೆಪ್ಪ ಕೆಂಬನ, ಸಣ್ಣಮರೆಪ್ಪ ಕೆಂಬನ, ಭೀಮಪ್ಪ ಹಂಚಿಕೇರ, ಹೀರಪಕ್ಷಪ್ಪ ಸಾದು, ಮಾನಪ್ಪ ಪೂಜಾರಿ, ಶಾಂತಪ್ಪ ಕುಳಿನ್, ನಿಂಗಪ್ಪ ಗಡದರ, ಶಾಂತಪ್ಪ ಕಳಸರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News