ಯಾದಗಿರಿ | ಬ್ರಿಜ್ ರಸ್ತೆ ಅಗಲೀಕರಣಕ್ಕೆ ಶಾಸಕರಿಗೆ ಮನವಿ
ಯಾದಗಿರಿ : ಶಹಾಪುರ ತಾಲೂಕಿನ ಹತ್ತಿಗುಡೂರ ದಿಂದ ತಿಂಥಣಿ ಬ್ರೀಜ್ ವರೆಗಿನ ರಸ್ತೆ ಇಕ್ಕಟ್ಟಾಗಿದ್ದು ಅಗಲೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ ಬಣದ ಮುಖಂಡರು ನಗರದಲ್ಲಿ ಶಾಸಕರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಹತ್ತಿಗುಡೂರನಿಂದ ತಿಂಥಣಿ ಬ್ರೀಜ್ ವರೆಗಿನ ರಸ್ತೆ ಏಕಪಥ ಇರುವುದರಿಂದ ವಾಹನಗಳ ಓಡಾಟಕ್ಕೆ ತುಂಬಾ ತೊಂದರೆಯುಂಟಾಗುತ್ತಿದೆ. ರಸ್ತೆ ಎರಡು ಬದಿಗಳಲ್ಲಿ ದೊಡ್ಡ ಮಟ್ಟದ ತಗ್ಗುಗಳಿರುವ ಕಾರಣ ನಿತ್ಯವು ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿವೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ 150 ಎ ರಸ್ತೆಯಾಗಿದ್ದು ಕನಿಷ್ಠಿ ದ್ವೀಪಥ ರಸ್ತೆಬೇಕು, ಆದರೆ ಒಂದೇ ರಸ್ತೆ ಇರುವ ಕಾರಣ ವಾಹನಗಳ ಓಡಾಟಕ್ಕೆ ತುಂಬಾ ತೊಂದರೆಯಾಗುತ್ತದೆ ಆದ್ದರಿಂದ ದ್ವೀಪಥ ರಸ್ತೆಯಾಗಿ ಅಗಲೀಕರಣಕ್ಕೆ ಸರಕಾರಕ್ಕೆ ಒತ್ತಾಯಿಸುವ ಮೂಲಕ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡುವಂತೆ ವಿನಂತಿಸಿದರು.
ನಂತರ ಶಾಸಕ ರಾಜಾ ವೇಣುಗೋಪಾಲ ನಾಯಕರಿಗೆ ಬರೆದ ಮನವಿಯನ್ನು ಅವರ ಕಚೇರಿಯಲ್ಲಿ ಮುಖಂಡ ರಾಜಾ ಸಂತೋಷ ಕುಮಾರ ನಾಯಕ ಅವರ ಮೂಲಕ ಸಲ್ಲಿಸಿದರು. ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ತಹಶೀಲ್ದಾರ್ ಹುಸೇನಸಾಬ್ ಎ.ಸರಕಾವಸ್ ಅವರ ಮೂಲಕವೂ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾ ಸಂಚಾಲಕ ಶಿವಲಿಂಗ ಹಸನಾಪುರ, ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ, ಅಲ್ಪಸಂಖ್ಯಾತರ ಘಟಕದ ಸಂಚಾಲಕ ಎಮ್.ಪಟೇಲ್, ರಮೇಧ ಬಡಿಗೇರ, ರಾಜು ಬಡಿಗೇರ, ವೆಂಕಟೇಶ ದೇವಾಪುರ, ಖಾಜಾ ಅಜ್ಮೀರ್, ಚನ್ನಬಸಪ್ಪ ತಳವಾರ, ಶೇಖರ ಮಂಗಳೂರ, ಅಬ್ದುಲ್ ಹಲೀಮ್, ಗ್ಯಾನಪ್ಪ ಕಾಂಬ್ಳೆ, ಹಣಮಂತ ರತ್ತಾಳ, ಶರ್ಮುದ್ಧಿನ್ ಖುರೇಷಿ, ಸಿದ್ದಪ್ಪ ಝಂಡದಕೇರಾ, ಪಾರಪ್ಪ ತಳವಾರ, ಮೌನೇಶ ದೇವತ್ಕಲ್, ದೇವೆಂದ್ರ ಬಡಿಗೇರ ಸೇರಿದಂತೆ ಅನೇಕರಿದ್ದರು.