ಯಾದಗಿರಿ | ಕುವೆಂಪು, ಅಮರಶಿಲ್ಪಿ ಜಕಣಾಚಾರಿ ಜಯಂತಿಯ ಪೂರ್ವಭಾವಿ ಸಭೆ
ಯಾದಗಿರಿ : ಸುರಪುರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ವಿಶ್ವಮಾನವ ಕುವೆಂಪು ಹಾಗೂ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆ ಅಂಗವಾಗಿ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಹುಸೇನಸಾಬ್ ಎ.ಸರಕಾವಸ್ ಮಾತನಾಡಿ, ಇದೇ ಡಿ.29 ರಂದು ಬೆಳಿಗ್ಗೆ ವಿಶ್ವಮಾನವ ಕುವೆಂಪು ಅವರ ಜಯಂತಿಯನ್ನು ತಾಲ್ಲೂಕು ಆಡಳಿತದಿಂದ ಆಚರಿಸಲಾಗುವುದು, ತಹಶೀಲ್ದಾರ್ ಕಚೇರಿಯಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವಿಸುವ ಮೂಲಕ ಆಚರಿಸಲಾಗುವುದು ಎಂದು ತಿಳಿಸಿದರು.
ಜ.1 ರಂದು ಬೆಳಿಗ್ಗೆ 10 ಗಂಟೆಗೆ ಸರಕಾರದ ಆದೇಶದಂತೆ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಅವರ ಜಯಂತಿ ಅಂಗವಾಗಿ, ಅಂದು ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಅಮರಶಿಲ್ಪಿ ಜಕಣಾಚಾರಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಉಪನ್ಯಾಸ ಕಾರ್ಯಕ್ರಮವೂ ನಡೆಯಲಿದೆ ಎಂದು ತಿಳಿಸಿದರು.
ಇಬ್ಬರು ಮಹನಿಯರ ಜಯಂತಿಯನ್ನು ತಾಲ್ಲೂಕಿನ ಎಲ್ಲಾ ಶಾಲಾ, ಕಾಲೇಜು, ಸರಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕು ಹಾಗೂ ತಾಲೂಕು ಆಡಳಿತದಿಂದ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಯ ಅನುಷ್ಠಾನಾಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು, ಭಾಗವಹಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ ನಾಯಕ, ಜೆಸ್ಕಾಂ ಎಇಇ ರಫಿಕ್, ದೈಹಿಕ ಶಿಕ್ಷಣಾಧಿಕಾರಿ ಮಲ್ಲಣ್ಣ ದೊಡ್ಮನಿ, ಸಿಡಿಪಿಓ ಅನಿಲಕುಮಾರ ಕಾಂಬ್ಳೆ, ಅಬಕಾರಿ ಇಲಾಖೆಯ ಭಾಗ್ಯಶ್ರೀ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾವೇರಿ, ಅರಣ್ಯ ಇಲಾಖೆಯ ಗಿರೀಶ ಕರ್ನಾಳ, ಸಮಾಜ ಕಲ್ಯಾಣ ಇಲಾಖೆಯ ಚನ್ನಕೇಶವ, ಕಾರ್ಮಿಕ ನಿರೀಕ್ಷಕ ಶಿವಪ್ಪ ಜಮಾದಾರ, ಅರಣ್ಯ ಇಲಾಖೆಯ ಡಿಆರ್ಎಫ್ಒ ಬೂದೆಪ್ಪ ಹಾಗೂ ಮುಖಂಡರುಗಳಾದ ದೇವು ಪತ್ತಾರ ತಳವಾರಗೇರ ,ಪ್ರಭು ಪತ್ತಾರ ಕಲಕೇರಿ, ಮಹೇಶ ಶಾರದಳ್ಳಿ, ಶೀಕಾಂತ ಚಿಕನಳ್ಳಿ, ರವಿಕುಮಾರ ಪತ್ತಾರ, ಭಾಸ್ಕರ ಪತ್ತಾರ, ಸಂಗಮೇಶ ಪತ್ತಾರ, ಸುರೇಶ ಕುಳಗೇರಿ, ನಾಗರಾಜ, ಸತೀಶಕುಮಾರ, ವಿರೇಶ ಕುಂಟೋಜಿ, ಈರಣ್ಣ, ತಿಪ್ಪಣ್ಣ ಸೇರಿದಂತೆ ಅನೇಕರು ಭಾಗವಹಿಸಿದ್ದರು.