ಯಾದಗಿರಿ | ಖಾನಾಪುರ ಗ್ರಾಮ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ
ಯಾದಗಿರಿ : ತಾಲ್ಲೂಕಿನ ಖಾನಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಬೆಂಬಲಿತ ಸದಸ್ಯೆ ಸರೋಜಮ್ಮ ನರಸಪ್ಪ ಅವರು ಆಯ್ಕೆಯಾದ ಹಿನ್ನಲೆಯಲ್ಲಿ ಕ್ಷೇತ್ರದ ಶಾಸಕ ಚೆನ್ನಾರಡ್ಡಿ ಪಾಟೀಲ್ ರನ್ನು ಶನಿವಾರ ಪಂಚಾಯತ್ ಸದಸ್ಯರು ಮತ್ತು ಮುಖಂಡರು ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಶಾಸಕರು, ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಮೂಲಭೂತ ಸೌಲಭ್ಯ ಒದಗಿಸಲು ಎಲ್ಲರೂ ಪ್ರಯತ್ನಿಸಬೇಕೆಂದರು. ಸರ್ಕಾರದ ಯೋಜನೆಗಳು ನಿಗದಿತ ಅವಧಿಯಲ್ಲಿ ಜನತೆಗೆ ಮುಟ್ಟಿಸಬೇಕೆಂದು ಹೇಳಿದರು.
ಗ್ರಾಪಂ ಸದಸ್ಯರಾದ ಜಾವಿದ್ ಪಾಶಾ, ಮರಿಲಿಂಗಪ್ಪ ಗುಂಡಳ್ಳಿ, ಇಮಾಮ್ ಪಟೇಲ್, ಹಣಮಂತ ರಾಯನೂರ, ಮಾಳಪ್ಪ ಪೂಜಾರಿ, ಮರಿಲಿಂಗಪ್ಪ ಮನಗನಾಳ್, ಆಶಪ್ಪ ಭಜಂತ್ರಿ, ಭೀಮರಾಯ ಮನಗನಾಳ್, ಸುಭಾಷ ಗುಂಡಳ್ಳಿ ಹಾಗೂ ಕಾಂಗ್ರೆಸ್ ಪಕ್ಷದ ಗ್ರಾಮೀಣ ಬ್ಲಾಕ್ ಅಧ್ಯಕ್ಷ ಲಕ್ಷ್ಮಾರಡ್ಡಿ, ಮುಖಂಡರಾದ ದೇವರಾಜ ಖಾನಪುರ, ಚನ್ನಯ್ಯಸ್ವಾಮಿ ಹಿರೇಮಠ, ಅರುಣಕುಮಾರ ಎಲೇರಿ, ಸೂರ್ಯಕಾಂತ, ಪರಶುರಾಮ ಪದ್ಮಾಕರ, ಮರೆಪ್ಪ ಬಿಳಾರ್, ಶರಣಗೌಡ ಕುರಕುಂದಿ, ಶರಣಪ್ಪ ಮನಗನಾಳ, ದೇವಿಂದ್ರಪ್ಪ ಮಣಮೂಟಗಿ, ಕರೆಪ್ಪ ಯಾದಗಿರಿ ಇತರರಿದ್ದರು.