ಯಾದಗಿರಿ | ಸುರಪುರದಲ್ಲಿ ಅಮಿತ್ ಶಾ ವಿರುದ್ಧ ಡಿಎಸ್ಎಸ್ ಬೃಹತ್ ಪ್ರತಿಭಟನೆ

Update: 2024-12-21 11:05 GMT

ಯಾದಗಿರಿ : ದೇಶದ ಸಂಸತ್ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ ಅವರನ್ನು ಭಾರತೀಯ ಪೌರತ್ವ ರದ್ದು ಮಾಡಿ ಹಾಗೂ ಭಾರತ ಸರ್ಕಾರದ ಕ್ಯಾಬಿನೆಟ್ ನಿಂದ ವಜಾಗೊಳಿಸಿ, ಅವರ ಮೇಲೆ ದೇಶದ್ರೋಹ ಪ್ರಕರಣದಡಿಯಲ್ಲಿ ಬಂಧಿಸಿ ಎಂದು ಆಗ್ರಹಿಸಿ ಸುರಪುರ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ವತಿಯಿಂದ ಮನವಿ ಪತ್ರ ಸಲ್ಲಿಸಿದರು.

ಮನವಿ ಪತ್ರ ಸಲ್ಲಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದ ರಾಜ್ಯ ಸಮಿತಿ ಸದಸ್ಯರಾದ ನಾಗಣ್ಣ ಬಡಿಗೇರ ಅವರು, ಶತ ಶತಮಾನಗಳಿಂದ ಜಾತಿ ವರ್ಣ ವ್ಯವಸ್ಥೆಯ ವಾಕ್ಯದ ಸಂಕೋಲೆಯಿಂದ ಬಿಡುಗಡೆಗೊಳಿಸಿದ ಮಹಾನಾಯಕ, ಇಡೀ ದೇಶ ಇವತ್ತು ಸ್ವಾಭಿಮಾನದಿಂದ ತಲೆ ಎತ್ತಿ ನಡೆಯುತ್ತಿದೆ ಎಂದರೆ ಅದಕ್ಕೆ ಬಾಬಾ ಸಾಹೇಬರ ಹೋರಾಟವೇ ಕಾರಣ ಎನ್ನುವುದು ಈ ದೇಶದ ಪ್ರತಿಯೊಬ್ಬ ಪ್ರಜ್ಞೆವಂತ ಪ್ರಜೆಗಳು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ರಾಜ್ಯ ಸಂಘಟನಾ ಸಂಚಾಲಕರಾದ ರಾಮಣ್ಣ ಕಲ್ಲದೇವನಹಳ್ಳಿ ಅವರು ಮಾತನಾಡಿ, ಭಾರತದ ಅಧುನಿಕ ಪಿತಾಮಹನಿಗೆ ಸಂಘ ಪರಿವಾರದಿಂದ, ಮನುವಾದ ಕುತಂತ್ರಿಗಳಿಂದ ಅಗಾಗ ಅವಮಾನ, ಹಿಯಾಳಿಸುವುದು ಮಾಡುತ್ತಲೇ ಬಂದಿದ್ದಾರೆ. ಈ ದೇಶದ ಪ್ರಜಾಪ್ರಭುತ್ವವನ್ನು ಘನತೆಯಿಂದ ಮುನ್ನಡೆಸಬೇಕಾದ ಕೇಂದ್ರ ಸರಕಾರದ ಗೃಹಮಂತ್ರಿಗಳು, ದೇಶದ ನಾಗರಿಕರ ಬಗ್ಗೆ ದೇಶದ ಅಭಿವೃದ್ಧಿ ಬಗ್ಗೆ ದೇಶದ ಗೌರವದ ಬಗ್ಗೆ ಮಾತನಾಡದೇ ದೇಶದ ಸ್ವಾಭಿಮಾನದ ಪ್ರತೀಕವಾಗಿದ್ದ ಡಾ.ಬಾಬಾಸಾಹೇಬ್ ಅವರಿಗೆ ಅವಮಾನ ಮಾಡುವ ಮತ್ತು ದೇಶದಲ್ಲಿ ಮನುಸ್ಮೃತಿಯನ್ನು ಮತ್ತೊಮ್ಮೆ ಜಾರಿಗೊಳಿಸಲೂ ಒಳಸಂಚು ನಡೆಸಿದ್ದಾರೆ ಎಂದು ಆರೋಪಿಸಿದರು

ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಸಂಚಾಲಕ ಮಾಳಪ್ಪ ಕಿರದಳ್ಳಿ, ಪರಶುರಾಮ ಮಹಲ್ ರೊಜಾ, ಶರಣಪ್ಪ ತಳವಾರಗೇರಾ, ಪ್ರಕಾಶ್ ಕಟ್ಟಿಮನಿ, ಸೇರಿದಂತೆ ಅನೇಕ ದಲಿತ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News