ಯಾದಗಿರಿ | ಅಮಿತ್ ಶಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ : ಡಾ.ಭೀಮಣ್ಣ ಮೇಟಿ

Update: 2024-12-20 12:16 GMT

ಯಾದಗಿರಿ : ಈ ದೇಶದ ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ದಲಿತ ಆದಿವಾಸಿ ಜನಾಂಗ ಸೇರಿದಂತೆ ಅನೇಕ ಮಾನವ ಸಂಕುಲಕ್ಕೆ ನ್ಯಾಯವನ್ನು ನೀಡಿ ಈ ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ಒಂದು ಜವಾಬ್ದಾರಿ ಹೊತ್ತಿರುವ ಕೇಂದ್ರದ ಗೃಹ ಮಂತ್ರಿ ಅಮೀತ್ ಶಾ ಅವರು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದು ಖಂಡನೀಯ ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಭೀಮಣ್ಣ ಮೇಟಿ ಒತ್ತಾಯಿಸಿದರು.

ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಇವತ್ತಿನ ಕಾಲದಲ್ಲಿ ಬೆಳಗಾದರೆ ಅಂಬೇಡ್ಕರ್ ಅವರನ್ನು ಸ್ಮರಿಸುತ್ತೆವೇ, ಅವರನ್ನು ಪೂಜಿಸುತ್ತೆವೇ ನಮ್ಮ ಉಸಿರು ಇರುವರೆಗೂ ಮತ್ತು ಮುಂದಿನ ನಮ್ಮ ಪೀಳಿಗೆಯು ಕೂಡ ಅವರನ್ನು ಸ್ಮರಿಸುತ್ತಾರೆ ಆದರೆ ಅಮಿತ್ ಶಾ ಅವರಿಗೆ ಅರಿವಿಲ್ಲ, ತಾನು ಕೂಡ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಅಡಿಯಲ್ಲಿ ಗೃಹ ಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಿನಿ ಎನ್ನುವುದು ಪರಿಜ್ಞಾನ ಕೂಡ ಅವರಿಗಿಲ್ಲ. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದವರಿಗೆ ಕಾನೂನಿನ ಶಿಕ್ಷೆ ಯಾಗದ ಹೋದರೆ ಯಾರು ಬದಲಾಗುವುದಿಲ್ಲ. ತಕ್ಷಣವೇ ಅಮಿತ್ ಶಾ ರಾಜೀನಾಮೆ ನೀಡಬೇಕು ಅವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.

ಇನ್ನೂ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕರು ಸದನದಲ್ಲಿ ಆಗ್ರಹಿಸುವ ಸಂದರ್ಭದಲ್ಲಿ ಬಿಜೆಪಿ ಎಂಎಲ್ಸಿ ಸಿ.ಟಿ ರವಿಯವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವ್ಯಾಚ ಶಬ್ಧವನ್ನು ಬಳಸಿದ್ದು ನೋಡಿದರೆ ಸಿ.ಟಿ ರವಿಯವರ ಸಂಸ್ಕೃತಿ ಮತ್ತು ಭಾರತೀಯ ಜನತಾ ಪಾರ್ಟಿಯ ಸಂಸ್ಕೃತಿ ಏನಂತ ಹೇಳುತ್ತದೆ. ಇದು ಸ್ಪಷ್ಟವಾಗಿ ಅವರ ಮನುವಾದದಲ್ಲಿ ಹಿಂದುಳಿದಿವರನ್ನು, ಅಲ್ಪಸಂಖ್ಯಾತರನ್ನು, ದಲಿತರನ್ನು, ಮಹಿಳೆಯರನ್ನು, ಯಾವ ರೀತಿಯ ಶೋಷಣೆ ಮಾಡಬೇಕು ಅಂತ ಹೇಳಿದ್ದಾರೆ. ಅದೇ ರೀತಿ ಹೆಬ್ಬಳ್ಕರ್ ಕುರಿತು ಅಸಹ್ಯಕರ ಹೇಳಿಕೆ ನೀಡಿದ್ದು, ನೋಡಿದರೆ ಬಿಜೆಪಿ ಯವರು ಮಹಿಳೆಯರಿಗೆ ಯಾವ ತರಹದ ಸ್ಥಾನಮಾನ ಕೊಡುತ್ತಾರೆ ಎನ್ನುವುದು ನಮಗೆ ಬಹಳ ನೋವಾಗಿದೆ.

ಕೂಡಲೇ ಸಿ.ಟಿ.ರವಿ ಯವರನ್ನ ಅವರ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಮತ್ತು ಲಕ್ಷ್ಮೀ ಹೇಬ್ಬಳ್ಕರ್ ಅವರಿಗೆ ನ್ಯಾಯ ನೀಡಬೇಕು ಎಂದು ಮೇಟಿ ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಅಂಬ್ರೇಶ, ಶೇಖ್ ಇಮ್ರಾನ್, ಬೇಂಜಿಮಿನ್ ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News