ಸುರಪುರ | ಆರೋಗ್ಯ ಇಲಾಖೆಯ ವಿವಿಧ ಸೇವೆಗಳ ಲೋಕಾರ್ಪಣೆ
ಯಾದಗಿರಿ : ಸರಕಾರದ ಕೋಟ್ಯಾಂತರ ರೂ. ಗಳ ಅನುದಾನದಲ್ಲಿ ವಿವಿಧ ಆರೋಗ್ಯ ಸೇವೆಗಳನ್ನು ಇಂದು ಲೋಕಾರ್ಪಣೆಗೊಳಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.
ಸುರಪುರ ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ʼಆರೋಗ್ಯ ಇಲಾಖೆಯ ವಿವಿಧ ಕಟ್ಟಡಗಳ ಉದ್ಘಾಟನೆ ಹಾಗೂ ಆರೋಗ್ಯ ಸೇವೆಗಳ ಲೋಕಾರ್ಪಣೆʼ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸೇವೆಗಳ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮನುಷ್ಯ ಕಾಯಿಲೆ ಬಂದಾಗ ಆಸ್ಪತ್ರೆಗೆ ಬರುವುದು ಸಹಜ, ಆದರೆ ಕಾಯಿಲೆ ಬರದಂತೆ ಎಲ್ಲರು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಜನರು ಆರೋಗ್ಯವಂತರಾಗಿದ್ದು, ಆಸ್ಪತ್ರೆಗೆ ಹೆಚ್ಚು ಜನರು ಬರದಂತಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುವುದಾಗಿ ಹೇಳಿದರು. ಅಲ್ಲದೆಪರಿಸರ ರಕ್ಷಣೆ ಎಲ್ಲರ ಜವಬ್ದಾರಿ ಪರಿಸರ ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ ಎಂದರು.
6.19ಕೋಟಿ ರೂ. ವೆಚ್ಚದ ವಿವಿಧ ಸೇವೆಗಳ ಲೋಕಾರ್ಪಣೆ :
ಸುರಪುರ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಕ ಪ್ರದೇಶಾಭಿವೃದ್ಧಿ ಮಂಡಳಿಯ 2.50ಕೋಟಿ ರೂ. ವೆಚ್ಚದಲ್ಲಿ ಸಿ.ಟಿ. ಸ್ಕ್ಯಾನ್ ಯಂತ್ರ, 99.02ಲಕ್ಷ ರೂ. ನೂತನ ರೇಡಿಯೋಲಾಜಿ ಕಟ್ಟಡ ಆಸ್ಸತ್ರೆಗೆ ಹೆಚ್ಚುವರಿ ಕೋಣೆಗಳ ನಿರ್ಮಾಣ, ಎಕ್ಸ್ ರೇ ಕೋಣೆ, ಆಲ್ಟ್ರಾಸೌಂಡ್ ವಿಭಾಗ, ಒಪಿಡಿ ಕೊಠಡಿಗಳ ನಿರ್ಮಾಣ, 55ಲಕ್ಷ ರೂ. ವೆಚ್ಚದ ಬ್ಲಾಕ್ ಲೆವೆಲ್ ಪಬ್ಲಿಕ್ ಹೆಲ್ತ್ ಲ್ಯಾಬ್ ಕಟ್ಟಡ, ಸಾರ್ವಜನಿಕರು ಹಾಗೂ ರೋಗಿಗಳಿಗಾಗಿ ಸುಸಜ್ಜಿತ ಪ್ರಯೋಗಾಲಯ, ರಕ್ತ ಸಂಗ್ರಹಣಾ ಘಟಕ, 2ಕೋಟಿ ರೂ. ವೆಚ್ಚದ ಸಿಬ್ಬಂದಿಗಳಿಗಾಗಿ ಸುಸಜ್ಜಿತ 6 ವಸತಿ ಗೃಹಗಳು, 15ಲಕ್ಷ ರೂ. ವೆಚ್ಚದಲ್ಲಿ ದ್ರವ ವೈದ್ಯಕೀಯ ಅಮ್ಲಜನಕ ಶೇಖರಣಾ ಘಟಕ ಲೋಕಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ.ಮಹೇಶ ಬಿರಾದಾರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ, ನಗರಸಭೆ ಅಧ್ಯಕ್ಷೆ ಹೀನಾ ಕೌಸರ್ ಶಕೀಲ್ ಅಹ್ಮದ, ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ, ಯೂಥ್ ಕಾಂಗ್ರೆಸ್ ಅಧ್ಯಕ್ಷ ರಾಜಾ ಕುಮಾರ ನಾಯಕ, ನಗರಸಭೆ ಸದಸ್ಯರಾದ ಸುಜಾತಾ ವೇಣುಗೋಪಾಲ ಜೇವರ್ಗಿ, ನರಸಿಂಹಕಾಂತ ಪಂಚಮಗಿರಿ, ಪ್ರಮುಖರಾದ ಮಲ್ಲಣ್ಣ ಸಾಹುಕಾರ ನರಸಿಂಗಪೇಟ, ರಾಜಾ ವಾಸುದೇವ ನಾಯಕ, ಬಸವರಾಜ ಜಮದ್ರಖಾನಿ, ರವಿಚಂದ್ರ ಸಾಹು ಆಲ್ದಾಳ, ದೊಡ್ಡದೇಸಾಯಿ ಗೋನಾಲ, ಅಬ್ದುಲ್ ಗಫಾರ ನಗನೂರಿ, ಮಹಿಬೂಬ ಒಂಟಿ, ವೆಂಕಟೇಶ ಹೊಸ್ಮನಿ, ಕಾಳಪ್ಪ ಕವಾತಿ, ಸುವರ್ಣಾ ಸಿದ್ರಾಮ ಎಲಿಗಾರ, ರಮೇಶ ದೊರೆ, ಭೀಮನಗೌಡ ಲಕ್ಷ್ಮೀ, ಬೀರಲಿಂಗ ಬಾದ್ಯಾಪುರ, ಡಾ.ಹಣಮರೆಡ್ಡಿ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ಹರ್ಷವರ್ಧನ ರಫುಗಾರ, ಡಾ.ಶಫೀ ಉಜ್ಜುಮ್, ಡಾ.ರಾಕೇಶ, ಡಾ.ಅಭಿಲಾಷ ಸಜ್ಜನ್, ಡಾ.ಅಮೋಘ ಡಾ.ಗುರುಮೂರ್ತಿ ಡಾ.ನದೀಮ್ ಇದ್ದರು.