ಯಾದಗಿರಿ | ಅಂಬೇಡ್ಕರ್ ಬಗ್ಗೆ ಅವಹೇಳನ : ಅಮಿತ್ ಶಾ ರಾಜೀನಾಮೆಗೆ ಆಗ್ರಹ

Update: 2024-12-19 14:46 GMT

ಯಾದಗಿರಿ : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಸರಕಾರದ ಗೃಹ ಸಚಿವ ಅಮಿತ್ ಶಾ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ನಾಗವಾರ ಬಣದ ಮುಖಂಡರು ಒತ್ತಾಯಿಸಿದರು.

ಸುರಪುರ ನಗರದ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಜ್ಞಾನದ ಕಣಜವಾಗಿದ್ದಾರೆ. ಅವರನ್ನು ಇಡೀ ಜಗತ್ತು ಗೌರವಿಸುತ್ತದೆ. ಆದರೆ ಅಮಿತ್ ಶಾ ಅವರು ಬರೀ ಅಂಬೇಡ್ಕರ್ ಎನ್ನುವ ಬದಲು ದೇವರ ಹೆಸರು ಸ್ಮರಣೆ ಮಾಡಿದ್ದರೆ ಏಳು ಜನ್ಮದ ಪುಣ್ಯಬರುತ್ತದೆ ಎನ್ನುವ ಮೂಲಕ ಕಂಪ್ಯೂಟರ್ ಯುಗದಲ್ಲೂ ಜನರನ್ನು ಮೌಢ್ಯದ ಕಾಲಕ್ಕೆ ಕರೆದುಕೊಂಡು ಹೋಗುವುದಲ್ಲದೆ ಅಂಬೇಡ್ಕರ್ ಅನ್ನು ಅವಹೇಳನಗೊಳಿಸಿ ಮಾತನಾಡಿದ್ದಾರೆ. ಇದರ ನೈತಿಕ ಹೊಣೆಹೊತ್ತು ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಹುಸೇನಸಾಬ್ ಎ.ಸರಕಾವಸ್ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಸಂಚಾಲಕ ಗೋಪಾಲ ಹೆಚ್.ತಳವಾರ, ವಕೀಲ ಎಮ್.ಎಸ್.ಹಿರೇಮಠ, ಮಂಜು ಮಲ್ಲಾ,ಸುಭಾಷ ತೇಲ್ಕರ್, ಶಿವಶರಣ ಆಲ್ಹಾಳ, ತಾಲೂಕು ಸಂಚಾಲಕ ಬಸವರಾಜ ವಜ್ಜಲ್, ಅಂಬರೀಷ ನಾಯಕ ಮಾವಿನಮಟ್ಟಿ, ರಾಮಚಂದ್ರ ವಾಗಣಗೇರಾ, ಶಿವಪ್ಪ ಜಿ.ಕಂಬಾರ, ಸಿದ್ದಣ್ಣ ಸುರಪುರಕರ್, ಪ್ರಭು ಕಟ್ಟಿಮನಿ, ವಿನಯ ಕರಡಕಲ್, ಭೀಮಣ್ಣ ವಜ್ಜಲ್, ರಮೇಶ ಬಾಚಿಮಟ್ಟಿ, ಬಸವರಾಜ ಬಾಚಿಮಟ್ಟಿ, ಹಣಮಂತ ಕಟ್ಟಿಮನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News