ಯಾದಗಿರಿ | ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ಬದುಕಿಗೆ ದಾರಿದೀಪ : ಉಮೇಶ್ ಕೆ ಮುದ್ನಾಳ

Update: 2024-12-22 11:52 GMT

ಯಾದಗಿರಿ : ಶರಣರಲ್ಲೇ ಶರಣ ಅದು ನಿಜ ಶರಣ ಎಂದು ನಾಮ ವಾಕ್ಯ ಪಡೆದ ನಿಜ ಶರಣ ಅಂಬಿಗರ ಚೌಡಯ್ಯ ಅವರ ಜಯಂತಿಯ ದಿನದಂದು ರಾಜ್ಯದ ಎಲ್ಲಾ ದಿನ ಪತ್ರಿಕೆಯಲ್ಲಿ ಅಂಬಿಗರ ಚೌಡಯ್ಯ ಅವರ ಜಾಹಿರಾತು ಮುಖ ಪುಟದಲ್ಲಿ ಪ್ರಕಟವಾಗಬೇಕು ಎಂದು ಸಮಾಜಿಕ ಹೋರಾಟಗಾರ ಉಮೇಶ್ ಕೆ ಮುದ್ನಾಳ ಅವರು ಸರಕಾರಕ್ಕೆ ಒತ್ತಾಯ ಮಾಡಿದರು.

ಜ.21ರಂದು ಸರ್ಕಾರದಿಂದ ಆಚರಿಸಲಾಗುವ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ನಿಮಿತ್ತ ತಾಲ್ಲೂಕಿನ ಗಣಪೂರ ಗ್ರಾಮದಲ್ಲಿ ವಿಶೇಷ ಅಭಿಯಾನಕ್ಕೆ ಚೌಡಯ್ಯನವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸರಕಾರ ನಮ್ಮ ಸಮುದಾಯಕ್ಕೆ ಮಲತಾಯಿ ಧೋರಣೆ ಮಾಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಹಳಷ್ಟು ಜನರಿಗೆ ಚೌಡಯ್ಯ ನವರ ವಿಚಾರ, ಅವರು ಮಾಡಿದ ಸಮಾಜದ ಪರಿವರ್ತನೆ ವಿಷಯಗಳು ತಿಳಿಯಬೇಕು ಎಂದರೆ ಸರಕಾರ ಅವರ ಜಯಂತಿ ದಿನದಂದು ಜಾಹಿರಾತು ಜೊತೆಗೆ ಅವರು ಮಾಡಿದ ವಚನ ವಾಕ್ಯಗಳು ಪ್ರಕಟವಾಗಬೇಕು ಎಂದು ಆಗ್ರಹಿಸಿದರು.

ನಿಜಶರಣ ಅಂಬಿಗರ ಚೌಡಯ್ಯನವರ ವಚನಗಳು ಬದುಕಿಗೆ ದಾರಿದೀಪವಾಗಿದ್ದು, ಮಹಾತ್ಮರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದತ್ತ ಸಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಣಮಂತ, ತಾಯಪ್ಪ, ನೀಲಕಂಠಯ್ಯಸ್ವಾಮಿ, ಸಣ್ಣ ಹಣಮಂತ, ಸಂತೋಷ, ಶರಣಪ್ಪ, ರಾಮಪ್ಪ, ತಾಯಪ್ಪ, ಮಹಾದೇವಪ್ಪ, ಅನೀಲ, ರಮೇಶ, ಬನ್ನಪ್ಪ, ಕನಕಪ್ಪ, ಬಸವರಾಜ, ಶ್ರೀಕಾಂತ ರವಿ, ಶಂಕ್ರಪ್ಪ, ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News