ಯಾದಗಿರಿ | ಪರೀಕ್ಷೆಯಿಂದ ವಿದ್ಯಾರ್ಥಿಗಳಲ್ಲಿ ತಾರ್ಕಿಕ ಚಿಂತನೆ, ಏಕಾಗ್ರತೆ ಹೆಚ್ಚಾಗುತ್ತದೆ : ಮಂಗಿಲಾಲ್ ಜೈನ್

Update: 2024-12-22 11:56 GMT

ಯಾದಗಿರಿ : ಚಿಕ್ಕಮಕ್ಕಳಿಗೆ ಅಬಕಾಸ್ ಮತ್ತು ವೇದಿಕ ಗಣಿತ ಪರೀಕ್ಷೆಯನ್ನು ಶಾಲೆಗಳಲ್ಲಿ ಏರ್ಪಡಿಸುವುದರಿಂದ ಅವರಲ್ಲಿ ತಾರ್ಕಿಕ ಚಿಂತನೆ, ಏಕಾಗ್ರತೆ ಹಾಗೂ ಸೃಜಲಶೀಲನೆ ಮೂಡಿ ಗಣಿತ ವಿಷಯದಲ್ಲಿ ಕೌಶಲ್ಯ ವಿಕಾಸವಾಗಿ ಜ್ಞಾನಾರ್ಜನೆಗೆ ಸಹಕಾರಿಯಾಗುತ್ತದೆ ಎಂದು ಶಹಾಪುರದ ಎಸ್.ಎಮ್.ಸಿ ಜೈನ ಶಾಲೆಯ ಅಧ್ಯಕ್ಷ ಮಂಗಿಲಾಲ್ ಮಂಗನಲಾಲ್ ಜೈನ್ ಹೇಳಿದರು.

ನಗರದ ಆರ್ಯಭಟ್ಟ ಅಂತರ್ ರಾಷ್ಟ್ರೀಯ ಅಕಾಡೆಮಿ ಶಾಲೆಯಲ್ಲಿ ಎಸ್ಆರ್ಜೆ ಶಿಕ್ಷಣ ಸಂಸ್ಥೆ ಕಲಬುರಗಿ ವತಿಯಿಂದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ ʼಅಬಕಾಸ್ ಮತ್ತು ವೇದಿಕ ಗಣೀತ ಕಿರು ಪರೀಕ್ಷೆʼ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಎದುರುಸಿದಾಗ ಮಾತ್ರ ಅವರು, ಕ್ಯಾಲುಕಲೇಟರ್ಗಿಂತ ವೇಗವಾಗಿ ಉತ್ತರಿಸಲು ಸಮರ್ಥರಾಗುತ್ತಾರೆ ಎಂದು ತಿಳಿಸಿದರು.

ಅಕಾಡೆಮಿಯ ಅಧ್ಯಕ್ಷ ಸುಧಾಕರ್ರೆಡ್ಡಿ ಮಾಲಿ ಪಾಟೀಲ್ ಅನಪೂರ ಮಾತನಾಡಿ, ಇಂತಹ ಪರೀಕ್ಷೆಗಳನ್ನು ಏರ್ಪಡಿಸುವದರಿಂದ ಚಿಕ್ಕ ಮಕ್ಕಳಲ್ಲಿ ಆತ್ಮವಿಶ್ವಾಸ, ಜ್ಞಾನ, ಸ್ಪರ್ಧಾ ಮನೋಭಾವನೆ ಮೂಡಿ ಅವರು ಮುಂದೆ ಮಹತ್ವದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೆಗಳನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದರು.

ವೇದಿಕೆ ಮೇಲೆ ಎಸ್ಆರ್ಜೆ ಶಿಕ್ಷಣ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಪ್ರೀಯ ಜೋಷಿ, ಸೈದಾಪೂರ ಶ್ರೀ ಭಗವಾನ ಮಹಾವೀರ ಶಾಲೆಯ ಕಾರ್ಯದರ್ಶಿ ಆನಂದ ದೋಕಾ, ಪಿ.ಅರವಿಂದಾಕ್ಷಣ, ಪ್ರಾಂಶುಪಾಲೆ ಮಾಶವಿ ಸಿಂಗ್, ರಾಘವೇಂದ್ರ ಜೋಷಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News