ಮೂಡುಬಿದರೆ: ಮಾ.16ರಂದು ಪ್ರಸಾದ್ ನೇತ್ರಾಲಯದ ನೂತನ ಕಣ್ಣಿನ ಆಸ್ಪತ್ರೆ ಶುಭಾರಂಭ

Update: 2025-03-14 17:42 IST
ಮೂಡುಬಿದರೆ: ಮಾ.16ರಂದು ಪ್ರಸಾದ್ ನೇತ್ರಾಲಯದ ನೂತನ ಕಣ್ಣಿನ ಆಸ್ಪತ್ರೆ ಶುಭಾರಂಭ
  • whatsapp icon

ಮೂಡುಬಿದಿರೆ: ಕರ್ನಾಟಕ, ಗೋವಾ ರಾಜ್ಯಗಳಲ್ಲಿ ತನ್ನ ಚಿಕಿತ್ಸಾ ಕೇಂದ್ರಗಳನ್ನು ಹೊಂದಿರುವ ಪ್ರಸಾದ್ ನೇತ್ರಾಲಯದ ನೂತನ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ಮೂಡುಬಿದರೆಯ ಜೈನ್ಪೇಟೆ ಬಡಗ ಬಸದಿ ಎದುರಿನ ಫಾರ್ಚೂನ್-2 ಬಹುಮಹಡಿ ಕಟ್ಟಡದ ಮೊದಲ ಮಹಡಿಯಲ್ಲಿ ಮಾ.16ರಂದು ಶುಭಾರಂಭಗೊಳ್ಳಲಿದೆ ಎಂದು ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಮೂಡುಬಿದಿರೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಥನಾಡಿದ ಅವರು, ಕಳೆದ 24 ವರ್ಷಗಳಿಂದ ನೇತ್ರ ಚಿಕಿತ್ಸೆಯಲ್ಲಿ ತನ್ನ ಪರಿಣತಿಯನ್ನು ಸ್ಥಾಪಿಸಿರುವ ಪ್ರಸಾದ್ ನೇತ್ರಾಲಯವು ಉಡುಪಿ, ಮಂಗಳೂರು, ಸುಳ್ಯ, ತೀರ್ಥಹಳ್ಳಿ, ಶಿವಮೊಗ್ಗ, ಗೋವಾ, ಪುತ್ತೂರು ಹಾಗೂ ಕಾಸರಗೋಡುನಲ್ಲಿ ಚಿಕಿತ್ಸಾ ಕೇಂದ್ರಗಳ ಮೂಲಕ ಜನರಿಗೆ ಸೇವೆಯನ್ನು ನೀಡುತ್ತಿದೆ. ನೇತ್ರ ಚಿಕಿತ್ಸೆಯಲ್ಲಿ ಅತ್ಯಾಧುನಿಕ, ಅಂತರ್‌ ರಾಷ್ಟ್ರೀಯ ಗುಣಮಟ್ಟದ ಚಿಕಿತ್ಸಾ ಉಪಕರಣಗಳನ್ನು ಅಳವಡಿಸಿಕೊಂಡು ತಜ್ಞ ವೈದ್ಯರು ಹಾಗೂ ತಾಂತ್ರಿಕ ಸಹಾಯಕರ ತಂಡದೊಂದಿಗೆ ಚಿಕಿತ್ಸೆ ನೀಡುತ್ತಿದೆ.

ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳಲ್ಲಿ ಕಣ್ಣಿನ ಪೊರೆ, ರೆಟಿನಾ, ಗ್ಲಾಕೋಮಾ, ಮೆಳ್ಳೆಗಣ್ಣು, ಮಕ್ಕಳ ಕಣ್ಣಿನ ಚಿಕಿತ್ಸೆ, ಕಣ್ಣಿನ ಕರಿಗುಡ್ಡೆ ಚಿಕಿತ್ಸೆ, ಲೇಸರ್ ಚಿಕಿತ್ಸೆ, ಕಾಂಟ್ಯಾಕ್ಟ್ ಲೆನ್ಸ್ ಕ್ಲಿನಿಕ್ ಗಳನ್ನೊಳಗೊಂಡಂತೆ ಲೇಸರ್ ಕಣ್ಣಿನ ಪೊರೆ ಚಿಕಿತ್ಸೆ, ಲಾಸಿಕ್/ಸ್ಟೈಲ್ ಮುಂತಾದ ಕನ್ನಡಕ ರಹಿತ ಮಾಡುವಂತಹ ಚಿಕಿತ್ಸೆ, ವಿಶ್ವದಲ್ಲಿಯೇ ನೂತನ ತಂತ್ರಜ್ಞಾನದ ರೋಬೋಟಿಕ್ ಕಣ್ಣಿನ ಪೊರೆಚಿಕಿತ್ಸೆ ಮುಂತಾದ ಎಲ್ಲಾ ವಿಭಾಗಗಳನ್ನು ಹೊಂದಿಕೊಂಡು, ಕಣ್ಣಿನ ಎಲ್ಲಾ ತೊಂದರೆಗಳಿಗೂ ಒಂದೇ ಸೂರಿನಡಿ ಚಿಕಿತ್ಸೆ ದೊರೆಯುವಂತಹ ಸೌಲಭ್ಯಗಳನ್ನು ಒದಗಿಸಲಿದೆ ಎಂದು ನುಡಿದರು.

ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ನೂತನ ಚಿಕಿತ್ಸಾ ಕೇಂದ್ರವನ್ನು ಮೂಡುಬಿದರೆ ಜೈನ್ ಮಠದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಆಶೀರ್ವದಿಸುವ ಮೂಲಕ ಶುಭಾರಂಭಗೊಳಿಸಲಿದ್ದಾರೆ.

ನೂತನ ಆಸ್ಪತ್ರೆಯ ಉದ್ಘಾಟನೆಯನ್ನು ಆಳ್ವಾಸ್ ಎಜುಕೇಷನ್ ಫೌಂಡೇಶನ್ ನ ಚೇರ್ಮನ್ ಡಾ. ಮೋಹನ್ ಆಳ್ವಾ ನೆರವೇರಿಸಲಿದ್ದಾರೆ. ಮೂಡುಬಿದರೆ ಶಾಸಕರಾದ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಜಿ ಸಚಿವರಾಧ ಅಭಯಚಂದ್ರ ಜೈನ್ ಭಾಗವಹಿಸಲಿದ್ದಾರೆ. ಮೂಡುಬಿದರೆ ನಗರಸಭಾಧ್ಯಕ್ಷೆ ಜಯಶ್ರೀ ಕೇಶವ್, ವಿರೋಧ ಪಕ್ಷ ನಾಯಕ ಪಿ.ಕೆ ಥಾಮಸ್, ಫಾರ್ಚೂನ್ ಪ್ರಮೋಟರ್ಸ್‌ ಆಡಳಿತ ಪಾಲುದಾರ ಮಹೇಂದ್ರ ವರ್ಮ ಜೈನ್ ಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆಗಳ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್, ಪ್ರಸಾದ್ ನೇತ್ರಾಲಯ ಮುಡುಬಿದರೆ ಇದರ ನಿರ್ದೇಶಕಿ ಡಾ. ಸ್ಮೃತಿ, ಡಾ. ವಿಕ್ರಮ್ ಜೈನ್ ಹಾಗೂ ಡಾ. ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News