ಗಾಂಜಾ ಸೇವನೆ ಆರೋಪ: ಇಬ್ಬರ ಸೆರೆ
Update: 2025-03-14 20:32 IST

ಮಂಗಳೂರು, ಮಾ.14: ಗಾಂಜಾ ಸೇವನೆ ಆರೋಪಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
*ನಗರದ ವಿ.ಟಿ. ರಸ್ತೆಯ ಬಳಿ ಅಮಲು ಪದಾರ್ಥ ಸೇವಿಸಿ ತೂರಾಡುತ್ತಿದ್ದ ಕೊಂಚಾಡಿ ನಾಗಕನ್ನಿಕ ದೇವಸ್ಥಾನ ರಸ್ತೆಯ ನಿವಾಸಿ ಕೌಶಿಕ್ ರಾವ್ (18) ಎಂಬಾತನನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.
ನಗರದ ಲಾಲ್‌ಬಾಗ್ ಬಳಿಕ ವಾಣಿಜ್ಯ ಸಂಕೀರ್ಣವೊಂದರ ಬಳಿ ಮಾದಕ ವಸ್ತು ಸೇವನೆ ಮಾಡಿದ ರೀತಿಯಲ್ಲಿ ಕಂಡು ಬಂದ ಮಂಜೇಶ್ವರ ಆಫ್ರೀದ್ (26)ಎಂಬಾತನನ್ನು ಬರ್ಕೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.