ಸಮಸ್ತ ಪಬ್ಲಿಕ್ ಪರೀಕ್ಷೆ ಫಲಿತಾಂಶ ಪ್ರಕಟ: ದ.ಕ ಜಿಲ್ಲೆಯಲ್ಲಿ 15 ಮಂದಿಗೆ ಟಾಪ್ ಪ್ಲಸ್

Update: 2025-03-15 22:56 IST
ಸಮಸ್ತ ಪಬ್ಲಿಕ್ ಪರೀಕ್ಷೆ ಫಲಿತಾಂಶ ಪ್ರಕಟ: ದ.ಕ ಜಿಲ್ಲೆಯಲ್ಲಿ 15 ಮಂದಿಗೆ ಟಾಪ್ ಪ್ಲಸ್
  • whatsapp icon

ಮಂಗಳೂರು, ಮಾ.15: ಪ್ರತಿಷ್ಠಿತ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ 2025 ಫೆಬ್ರವರಿಯಲ್ಲಿ ನಡೆಸಿದ ಜನರಲ್ ಮದರಸ ಹಾಗೂ ಸ್ಕೂಲ್ ಸಿಲಬಸ್ ಮದರಸಗಳ ಪಬ್ಲಿಕ್ ಪರೀಕ್ಷೆ ಫಲಿತಾಂಶಗಳು ಪ್ರಕಟಗೊಂಡಿದೆ.

ಭಾರತ ಮತ್ತು ವಿದೇಶಗಳ ಮದರಸಗಳ ಐದು, ಏಳು,ಹತ್ತು ಮತ್ತು ಪ್ಲಸ್ ಟು ತರಗತಿಗಳಲ್ಲಿ ನೋಂದಣಿ ಮಾಡಿದ 2,68,921 ವಿದ್ಯಾರ್ಥಿಗಳಲ್ಲಿ 2,65,395 ಮಂದಿ ಭಾಗವಹಿಸಿದ್ದು 2,60,256 ಉತ್ತೀರ್ಣರಾಗಿ ಶೇ 98.6 ಫಲಿತಾಂಶ ಬಂದಿದೆ.

ಕೇರಳದ ಚೇಳಾರಿ ಕೇಂದ್ರಸ್ಥಾನವಾಗಿ ಕಾರ್ಯಾಚರಿಸುತ್ತಿರುವ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ ಕೇರಳ ಹೊರತಾಗಿ ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್, ತೆಲಂಗಾಣ ಮಹಾರಾಷ್ಟ್ರ, ತಮಿಳುನಾಡು, ಉತ್ತರ ಪ್ರದೇಶ, ಉತ್ತರಾಂಚಲ ರಾಜ್ಯಗಳು, ಪಾಂಡಿಚೇರಿ, ಅಂಡಮಾನ್, ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಗಳು, ಯುಎಇ, ಒಮಾನ್, ಬಹರೈನ್, ಖತರ್, ಸೌದಿ ಅರೇಬಿಯಾ , ಕುವೈತ್, ಮಲೇಷ್ಯಾ ವಿದೇಶ ರಾಷ್ಟ್ರಗಳ 10948 ಮದರಸಗಳು ಅಂಗೀಕೃತಗೊಂಡಿದ್ದು ಪ್ರಸ್ತುತ ಮದರಸಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಫಲಿತಾಂಶ www. samastha.info, http//result.samastha.info ವೆಬ್ ಸೈಟ್ ನಲ್ಲಿ ಲಭ್ಯವಿದೆ.

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರೀಕ್ಷೆಗೆ ನೋಂದಣಿಯಾದ 9,174 ವಿದ್ಯಾರ್ಥಿಗಳ ಪೈಕಿ 9065 ಮಂದಿ ಪರೀಕ್ಷೆ ಬರೆದಿದ್ದಾರೆ. 8,786 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 96.92 ತೇರ್ಗಡೆ ಹೊಂದುವ ಮೂಲಕ ಉತ್ತಮ ಫಲಿತಾಂಶ ದಾಖಲಾಗಿದೆ.

*15 ಮಂದಿಗೆ ಟಾಪ್ ಪ್ಲಸ್*

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15 ವಿದ್ಯಾರ್ಥಿಗಳು ಟಾಪ್ ಪ್ಲಸ್ ಸ್ಥಾನದೊಂದಿಗೆ ತೇರ್ಗಡೆ ಹೊಂದಿದ್ದಾರೆ. ಸುಳ್ಯ ರೇಂಜ್ ಅಡ್ಕ ಮುರ್ಷಿದುತುಲ್ಲಾಬ್ ಮದರಸದ ಫಾತಿಮಾ ಫರಹ, ಅರಂಬೂರು ಹಿದಾಯಿತುಲ್ ಇಸ್ಲಾಂ ಮದರಸದ ಶನ್ಝ ಫಾತಿಮಾ ಹಾಗೂ ಫಾತಿಮಾ ಶಿಫಾನ, ಮಂಡೆಕೋಲು ಕುವ್ವತುಲ್ ಇಸ್ಲಾಂ ಮದರಸದ ಫಾತಿಮಾ ಶಹಮ, ವಿಟ್ಲ ರೇಂಜ್ ಮರಕ್ಕಣಿ ಮಹದನುಲ್ ಉಲೂಮ್ ಮದರಸದ ಆಯಿಶಾ ಬಸರಿಯ,ಕಲ್ಲಡ್ಕ ರೇಂಜ್ ಕೆ.ಸಿ ರೋಡು ನೂರುಲ್ ಉಲೂಮ್ ಮದರಸದ ಅಬೂಬಕರ್ ಇಶಾನ್ ಹಾಗೂ ಖದೀಜಾ ಮನ್ಹಾ , ಮಾಡನ್ನೂರು ರೇಂಜ್ ಪಾಳ್ಯತ್ತಡ್ಕ ತರ್ಬಿಯತುಲ್ ಅನಾಮ್ ಮದರಸದ ಸಫಾ ಹನೀನ್ ಹಾಗೂ ಶಝನ, ಕೂರ್ನಡ್ಕ ರೇಂಜ್ ಚಾಪಳ್ಳ ಹಿದಾಯತುಲ್ ಇಸ್ಲಾಂ ಮದರಸದ ಆಯಿಶತ್ ಇಹ್ಸಾನ, ಉಪ್ಪಿನಂಗಡಿ ರೇಂಜ್ ಕರಾಯ ಹಿದಾಯತುಲ್ ಇಸ್ಲಾಮ್ ಮದರಸದ ಆಯಿಶಾ ಅಫ್ರ, ಕಡಬ ರೇಂಜ್ ಮುಈನುಲ್ ಇಸ್ಲಾಂ ಕಡಬ ಮದರಸದ ಸುಹೈಮ, ಲಿಬಾ ಫಾತಿಮಾ, ಆಯಿಶಾ ಶಿಫಾ, ಬಾಂಬಿಲ ರೇಂಜ್ ನೆಲ್ಲಿಗುಡ್ಡೆ ಹಯಾತುಲ್ ಇಸ್ಲಾಂ ಮದರಸದ ಆಫಿಯಾ ಟಾಪ್ ಪ್ಲಸ್ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ಒಂದು ವಿಷಯದಲ್ಲಿ ಮಾತ್ರ ಗೈರು ಹಾಜರಿ ಅಥವಾ ಅನುತ್ತೀರ್ಣರಾದವರಿಗೆ 2025 ಎಪ್ರಿಲ್ 13 ರಂದು ಆಯಾ ಡಿವಿಷನ್ ಕೇಂದ್ರಗಳಲ್ಲಿ ನಡೆಯುವ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಭಾಗವಹಿಸಬಹುದು www.samastha.info ವೆಬ್‌ಸೈಟ್‌ನಲ್ಲಿ ಮದರಸ ಲಾಗಿನ್ ಮಾಡಿ ಮಾರ್ಚ್ 18ರಿಂದ 25 ತನಕ 240 ರೂ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕಾಗಿದೆ.

ಮರು ಮೌಲ್ಯಮಾಪನ

ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಅವಕಾಶವಿದ್ದು ಪ್ರತಿ ವಿಷಯಕ್ಕೆ 100ರೂ ಶುಲ್ಕ ಪಾವತಿಸಿ ಸಮಸ್ತ ವೆಬ್ ಸೈಟ್‌ನಲ್ಲಿ ಮದರಸ ಲಾಗಿನ್ ಮಾಡಿ ಮಾರ್ಚ್ 18ರಿಂದ 25 ತನಕ ಅರ್ಜಿ ಸಲ್ಲಿಸಬಹುದು ಎಂದು ಸಮಸ್ತ ವಿದ್ಯಾಭ್ಯಾಸ ಬೋರ್ಡ್ ಪರವಾಗಿ ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News