ಮಂಗಳೂರು: ಎ.18ರಿಂದ ಕರ್ನಾಟಕ ಬ್ಯಾರೀಸ್ ಫೆಸ್ಟಿವಲ್; ಬ್ರೋಷರ್ ಬಿಡುಗಡೆ

ಮಂಗಳೂರು: ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಎಪ್ರಿಲ್ 18,19,20ರಂದು ನಡೆಯಲಿರುವ ಕರ್ನಾಟಕ ಬ್ಯಾರೀಸ್ ಫೆಸ್ಟಿವಲ್ ಇದರ ಬ್ರೋಷರ್ ಬಿಡುಗಡೆ ಕಾರ್ಯಕ್ರಮ ಪಾಂಡೇಶ್ವರದಲ್ಲಿರುವ ಫಿಝಾ ನೆಕ್ಸಸ್ ಆವರಣದಲ್ಲಿ ರವಿವಾರ ನಡೆಯಿತು.
ಈ ಸಂದರ್ಭ ಇಫ್ತಾರ್ ಕೂಟವನ್ನು ಆಯೋಜಿಸಲಾಯಿತು. ಅಲ್ಲದೆ ಬ್ಯಾರೀಸ್ ಫೆಸ್ಟಿವಲ್ ಸಂದರ್ಭ ಅಗಲಿದ ಪ್ರಮುಖರ ಹೆಸರಿನಲ್ಲಿ ನೀಡಲಾಗುವ ʼಬ್ಯಾರಿ ಸಮುದಾಯತ್ತೆ ಮಾಣಿಕ್ಯʼ ಪ್ರಶಸ್ತಿಯನ್ನು ನೀಡುವ ಬಗ್ಗೆ ಘೋಷಿಸಲಾಯಿತು.

ಮಾಜಿ ಲೋಕಾಯುಕ್ತ ನ್ಯಾ. ಡಾ. ಸಂತೋಷ್ ಹೆಗ್ಡೆ ಅವರು ಕರ್ನಾಟಕ ಬ್ಯಾರೀಸ್ ಫೆಸ್ಟಿವಲ್‌ನ ಬ್ರೋಷರ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಸಮಾಜದಲ್ಲಿ ಶಾಂತಿ, ಸೌಹಾರ್ದ ಮುಖ್ಯ. ಅದಿದ್ದರೆ ಮಾತ್ರ ನಾಡಿನ ಪ್ರಗತಿಯಾಗಲಿದೆ. ನಾವು ನಿಜವಾದ ಮನುಷ್ಯನಾಗಿ ಬದುಕಬೇಕೇ ವಿನಃ ತಪ್ಪು ಎಸಗುವ ಮನುಷ್ಯರಾಗಿ ಜೀವಿಸಬಾರದು. ಮನುಷ್ಯರಾದ ಮೇಲೆ ಆಸೆಗಳು ಸಹಜ. ಆದರೆ ಯಾವ ಕಾರಣಕ್ಕೂ ನಮಗೆ ದುರಾಸೆಗಳು ಇರಬಾರದು. ಅದಕ್ಕೆ ಎಲ್ಲೂ ಮದ್ದಿಲ್ಲ. ಅದರಿಂದ ಸಂಕಷ್ಟ ಜಾಸ್ತಿಯಾಗಲಿದೆ ಮತ್ತು ನೆಮ್ಮದಿಯೂ ಕೆಡಲಿದೆ. ಹಾಗಾಗಿ ಹಿರಿಯರು ಕಟ್ಟಿದ ಮೌಲ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿಯು ಪ್ರತಿಯೊಬ್ಬರದ್ದಾಗಲಿ. ಅದಕ್ಕಾಗಿ ಇಂತಹ ಸೌಹಾರ್ದ ಇಫ್ತಾರ್ ಕೂಟಗಳು ಮತ್ತು ಹಬ್ಬಗಳು ಹೆಚ್ಚಾಗಲಿ ಎಂದು ಆಶಿಸಿದರು.

ರಾಜ್ಯ ಅಲೈಡ್ ಆ್ಯಂಡ್ ಹೆಲ್ತ್‌ಕೇರ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ, ರಾಜ್ಯ ವಕ್ಫ್ ಬೋರ್ಡ್‌ನ ಮಾಜಿ ಅಧ್ಯಕ್ಷ ಶಾಫಿ ಸಅದಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಮಾಜಿ ಡಿಸಿಪಿ ಜಿ.ಎ. ಬಾವ, ಕಣಚೂರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಕಣಚೂರು ಮೋನು, ಭಟ್ಕಳದ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಉಡುಪಿ ಎಡಿಸಿ ಆಬಿದ್ ಗಡಿಯಾಲ್, ಎಸ್‌ಡಿಪಿಐ ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್, ಇಬ್ರಾಹಿಂ ಗೋಳಿಕಟ್ಟೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್., ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್, ಮಾಜಿ ಮೇಯರ್ ಕೆ. ಅಶ್ರಫ್, ಸಾಮಾಜಿಕ ಮುಖಂಡ ಹೈದರ್ ಪರ್ತಿಪ್ಪಾಡಿ, ಇಸ್ಮಾಯಿಲ್ ಮೂಡುಶೆಡ್ಡೆ, ಸುಹೈಲ್ ಕಂದಕ್, ಟಿ.ಎಂ. ಶಹೀದ್ ತೆಕ್ಕಿಲ್, ಡಾ. ಅಬೂಬಕರ್ ಸಿದ್ದೀಕ್ ಅಡ್ಡೂರು, ಖಾಲಿದ್ ಉಜಿರೆ, ಮುಸ್ತಫಾ ಭಾರತ್, ಸಂಘಟಕರಾದ ಇಕ್ಬಾಲ್ ಪರ್ಲ್ಯ, ಮನ್ಸೂರ್ ಕುಂದಾಪುರ, ಇರ್ಶಾದ್ ದಾರಿಮಿ ಮಿತ್ತಬೈಲ್ ಉಪಸ್ಥಿತರಿದ್ದರು.
ರಫೀಕ್ ಮಾಸ್ಟರ್ ಮತ್ತು ಶಾಹಿಲ್ ಝಹೀರ್ ಕಾರ್ಯಕ್ರಮ ನಿರೂಪಿಸಿದರು.
