ಕೋಮು ದ್ವೇಷ ಭಾಷಣ| ಸೂಲಿಬೆಲೆ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಗೆ ದೂರು

Update: 2025-03-17 00:05 IST
ಕೋಮು ದ್ವೇಷ ಭಾಷಣ| ಸೂಲಿಬೆಲೆ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಗೆ ದೂರು
  • whatsapp icon

ಉಳ್ಳಾಲ: ಇತ್ತೀಚೆಗೆ ಕುತ್ತಾರಿನಲಿ ಕೋಮು ದ್ವೇಷ ಭಾಷಣ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾಂಗ್ರೆಸ್ ಮುಖಂಡರು ಉಳ್ಳಾಲ ಠಾಣೆಗೆ ರವಿವಾರ ದೂರು ನೀಡಿದ್ದಾರೆ.

ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷರಾದ ಮುಸ್ತಫಾ ಅಬ್ದುಲ್ಲಾ ನೇತೃತ್ವ ವಹಿಸಿದ್ದರು.

ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಉಸ್ಮಾನ್ ಕಲ್ಲಾಪು, ಅಯ್ಯೂಬ್ ಮಂಚಿಲ, ದಿನೇಶ್ ಕುಂಪಲ, ರಶೀದ್ ಯೂಸುಫ್, ರಹ್ಮಾನ್ ಕೋಡಿಜಾಲ್, ಚಂದ್ರಿಕಾ ರೈ, ಸುರೇಖಾ ಚಂದ್ರಹಾಸ್, ಅಬ್ದುಲ್ ಜಬ್ಬಾರ್, ಮನ್ಸೂರ್ ಮಂಚಿಲ, ರಿಚಾರ್ಡ್, ಝಿಯಾದ್, ಜಬ್ಬಾರ್ ಮೇಲಂಗಡಿ, ನವನೀತ್ ಸುಂದರಿ ಬಾಗ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News