ದಿಗಂತ್ ನಾಪತ್ತೆ ಪ್ರಕರಣಕ್ಕೆ ಮತೀಯ ಬಣ್ಣ ಹಚ್ಚಲು ಯತ್ನ; ಫರಂಗಿಪೇಟೆಯಲ್ಲಿ ನಡೆಯಬೇಕಿದ್ದ ಪ್ರತಿಭಟನೆ ಮುಂದೂಡಿಕೆ
Update: 2025-03-14 14:32 IST

ಫರಂಗಿಪೇಟೆ, ಮಾ.14: ಅಮೆಮ್ಮಾರ್ ಕಿದೆಬೆಟ್ಟು ನಿವಾಸಿ ದಿಗಂತ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಶಾಸಕ, ಸಂಸದರು, ಹಾಗೂ ಸಂಘ ಪರಿವಾರದ ಮುಖಂಡರು ಫರಂಗಿಪೇಟೆಯಲ್ಲಿ ನಡೆಸಿದ ಪೊಲೀಸ್ ಹೊರ ಠಾಣೆ ಮುತ್ತಿಗೆ ಬಳಿಕ ನಡೆಸಿದ ಪ್ರತಿಭಟನೆಯಲ್ಲಿ ಮುಸ್ಲಿಮರ ವಿರುದ್ಧ ಇಲ್ಲದ ಸಲ್ಲದ ಆರೋಪ ಮಾಡಿ ಪ್ರಚೋದನೆಗೈದು ಸಾಮರಸ್ಯ ಕದಡಲು ಪ್ರಯತ್ನಿಸಿದ್ದನ್ನು ಖಂಡಿಸಿ ಮಾರ್ಚ್ 14 ಶುಕ್ರವಾರ ಅಮೆಮ್ಮಾರ್ ಮಸೀದಿ ಆಡಳಿತ ಸಮಿತಿ ಹಾಗೂ ಪುದು ಗ್ರಾಮದ ಎಲ್ಲಾ ಮಸೀದಿ ಆಡಳಿತ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಫರಂಗಿಪೇಟೆ ಜಂಕ್ಷನ್ ನಲ್ಲಿ ಪ್ರತಿಭಟನೆ ಆಯೋಜಿಸಲಾಗಿತ್ತು.
ಈ ಪ್ರತಿಭಟನೆಗೆ ಬಂಟ್ವಾಳ ಪೊಲೀಸ್ ಆರಕ್ಷಕ ಠಾಣೆಯಿಂದ ಅನುಮತಿ ನೀಡದ ಕಾರಣದಿಂದ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಅಮೆಮ್ಮಾರ್ ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಶಾಫಿ ಅಮೆಮ್ಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.