ತುಳು ನಟ ವಿವೇಕ್ ಮಾಡೂರು ನಿಧನ

Update: 2025-03-14 11:40 IST
ತುಳು ನಟ ವಿವೇಕ್ ಮಾಡೂರು ನಿಧನ
  • whatsapp icon

ಉಳ್ಳಾಲ: ತುಳು ನಟ ವಿವೇಕ್ ಮಾಡೂರು(52) ಶುಕ್ರವಾರ ಬೆಳಿಗ್ಗೆ ಮಾಡೂರಿನ ಸ್ವಗೃಹದಲ್ಲಿ ನಿಧನರಾದರು.

ಗುರುವಾರ ರಾತ್ರಿ ಮನೆಯಲ್ಲಿ ಮಲಗಿದ್ದ ಅವರನ್ನು ಇಂದು ಬೆಳಿಗ್ಗೆ ಮನೆ ಮಂದಿ ಎಬ್ಬಿಸಲು ಹೋದಾಗ ಮೃತಪಟ್ಟಿರುವುದು ತಿಳಿದು ಬಂದಿದೆ.

ಮೃತ ವಿವೇಕ್ ಅವರು ಪತ್ನಿ ವೇದಾವತಿ ಜೊತೆ ಮಾಡೂರಿನ ಸಹೋದರನ ಮನೆಯಲ್ಲಿ ವಾಸವಾಗಿದ್ದರು. ಈ ಹಿಂದೆ ಟೆಲಿಫೋನ್ ಎಸ್ ಟಿಡಿ ಬೂತ್ ನಡೆಸುತ್ತಿದ್ದ ವಿವೇಕ್ ಅವರು ಬೂತ್ ಮುಚ್ಚಿದ ಬಳಿಕ ಅಣ್ಣನ ದಿನಸಿ ಅಂಗಡಿಯಲ್ಲೇ ಪ್ಲಾಸ್ಟಿಕ್ ಮನೆ ಬಳಕೆಯ ಸಾಮಾಗ್ರಿಗಳನ್ನು ಮಾರಾಟ ನಡೆಸುತ್ತಿದ್ದರು.

ಕಳೆದ ಕೆಲ ದಶಕಗಳಿಂದ ತುಳು ರಂಗಭೂಮಿಯಲ್ಲದೆ, ತುಳು ಚಿತ್ರರಂಗದಲ್ಲೂ ತನ್ನ ಕುಬ್ಜ ದೇಹದಿಂದಲೇ ಕಲಾರಸಿಕರನ್ನು ರಂಜಿಸುತ್ತಿದ್ದ ವೃತ್ತಿಪರ ಹಾಸ್ಯ ಕಲಾವಿದರಾಗಿದ್ದ ವಿವೇಕ್ ಅವರು, ಕರಾವಳಿಯ ಹೆಸರಾಂತ ನಾಟಕ ತಂಡಗಳಲ್ಲಿ ಅಭಿನಯಿಸಿದಲ್ಲದೆ,ತುಳು ಚಿತ್ರಗಳಲ್ಲಿ ಕೋಸ್ಟಲ್ ವುಡ್ ನ ಮೇರು ಕಲಾವಿದರೊಂದಿಗೆ ನಟಿಸಿದ್ದಾರೆ.

ತುಳು ನಾಟಕ ಕಲಾವಿದರ ಒಕ್ಕೂಟದಲ್ಲೂ ಅವರು ಸದಸ್ಯರಾಗಿದ್ದರು. ವಿವೇಕ್ ಅವರ ಕಲಾ ಪ್ರಾವೀಣ್ಯತೆಗೆ ಅನೇಕ ಸಂಘ, ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದೆ.

ಅವರ ಅಕಾಲಿಕ ಅಗಲಿಕೆಗೆ ತುಳು ರಂಗಭೂಮಿ ,ಕೋಸ್ಟಲ್ ವುಡ್ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News