ಮಂಗಳೂರು: 20ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಮಂಗಳೂರು, ಜ.11: ಮಂಜುನಾಥ್ ಎಜುಕೇಶನ್ ಟ್ರಸ್ಟ್ (ರಿ), ಹೃದಯವಾಹಿನಿ ಮಂಗಳೂರು, ಎಸ್‌ಕೆ ಮುನ್ಸಿಪಲ್ ಎಂಪ್ಲಾಯಿಸ್ ಯೂನಿಯನ್ (ರಿ) ಸಂಯುಕ್ತವಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದ ಸಾರಾ ಅಬೂಬಕರ್ ಸಂಸ್ಮರಣಾ ವೇದಿಕೆಯಲ್ಲಿ ಗುರುವಾರ 20ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ನಡೆಯಿತು.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮನೋಜ್ ಕುಮಾರ್ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ನಿವೃತ್ತ ಜಿಲ್ಲಾಧಿಕಾರಿ, ಲೇಖಕ ಡಾ.ಡಿ.ಎಸ್. ವಿಶ್ವನಾಥ್ ಪ್ರತಿಯೊಬ್ಬರಲ್ಲೂ ಅಧ್ಯಯನ ಶೀಲತೆ ನಿರಂತರವಾಗಿರಬೇಕು. ಅದು ಮಾನಸಿಕವಾಗಿ ಮತ್ತು ಬೌದ್ಧಿಕವಾಗಿ ದೃಢತೆ ಹಾಗೂ ಧೈರ್ಯವನ್ನು ತುಂಬುತ್ತದೆ. ಇದರಿಂದ ಸ್ವಸ್ಥ ಹಾಗೂ ಸೌಹಾರ್ದ ಸಮಾಜದ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಮ್ಮೇಳನ ಸಮಿತಿಯ ಅಧ್ಯಕ್ಷ ಕೆಪಿ ಮಂಜುನಾಥ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪೊಲೀಸ ಅಧಿಕಾರಿ ಜಿ.ಎ. ಬಾವ, ಎಸ್‌ಕೆ ಮುನ್ಸಿಪಲ್ ಎಂಪ್ಲಾಯಿಸ್ ಯೂನಿಯನ್ ಪೂರ್ವಾಧ್ಯಕ್ಷ ಶಿವರಾಜ್ ಪಾಂಡೇಶ್ವರ, ಅನಿವಾಸಿ ಕನ್ನಡಿಗ ಮುಹಮ್ಮದ್ ಹಾಜಿ ಕುಕ್ಕುಳ್ಳಿ, ಅಮೃತಾ ಪ್ರಕಾಶ ಪತ್ರಿಕೆಯ ಸಂಪಾದಕಿ ಮಾಲತಿ ಶೆಟ್ಟಿ ಮಾಣೂರು, ಎಎಸ್ಸೈ ಗೋಪಾಲ ಕೃಷ್ಣ ಬಜ್ಪೆಮಾತನಾಡಿದರು.
ವಿವಿಧ ಕ್ಷೇತ್ರದ ಸಾಧಕರಾದಚ ಅನಿವಾಸಿ ಕನ್ನಡಿಗ ದಿವಾಕರ್ ಪೂಜಾರಿ ಉಡುಪಿ, ಬಾಳೆಹೊನ್ನೂರಿನ ಅಬ್ದುಲ್ ರೆಹಮಾನ್ ಮತ್ತು ಜೋಹರಾ ದಂಪತಿ, ಶಿವಮೊಗ್ಗದ ಪ್ರಗತಿಪರ ಕೃಷಿಕ ಕೆಸಿ ಮೂರ್ತಿ ಮತ್ತು ತಾರಸಿ ತೋಟ ಕೃಷಿಕ ಕೃಷ್ಣಪ್ಪಗೌಡ ಪಡ್ಡಂಬೈಲು ಅವರನ್ನು ಸನ್ಮಾನಿಸಲಾಯಿತು.
ಕವಿ ಅನ್ಸಾರ್ ಕಾಟಿಪಳ್ಳ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಎಚ್. ಭೀಮರಾವ್ ಮಾಸ್ಟರ್ ಸುಳ್ಯ, ಆರ್‌ಎನ್ ಗೋಗೇರಿ ಹುಬ್ಬಳ್ಳಿ, ಡಾ. ಸುರೇಶ್ ನೆಗಲಗುಳಿ, ಎನ್. ನಾಗೇಂದ್ರ ಮಂಗಳೂರು, ಎಂಎಸ್ ವೆಂಕಟೇಶ್ ಗಟ್ಟಿ ಸೌದಿ ಅರೇಬಿಯಾ, ವೀಣಾರಾಜ್ ವಾಮಂಜೂರು, ಕಸ್ತೂರಿ ಜಯರಾಮ್ ಕಾವೂರು, ಹರಿಣಾಕ್ಷಿ ಕಾಶಿಪಟ್ಟಣ ಕವನಗಳನ್ನು ವಾಚಿಸಿದರು. ನಟರಾಜ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು.