ಮಂಗಳೂರು: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಲ್ಲಿ ವಧುವಿನ ಆಭರಣಗಳ ಪ್ರದರ್ಶನ-ಮಾರಾಟಕ್ಕೆ ಚಾಲನೆ

Update: 2025-01-11 14:09 GMT

ಮಂಗಳೂರು: ನಗರದ ಫಳ್ನೀರ್ ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಯಲ್ಲಿ ವಧುವಿನ ಆಭರಣಗಳ ಪ್ರದರ್ಶನ-ಮಾರಾಟಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಆಯಿಶಾ ಫ್ಯಾಶನ್ ಬ್ಯೂಟಿಕ್‌ನ ನಝಾರಾ ಇದರ ಮಾಲಕಿ ಆಯಿಶಾ ಮೆಹನಾಝ್ ಮತ್ತು 2021ರ ಕರ್ನಾಟಕ ಮಿಸೆಸ್ ವಿಜೇತೆ, ಸುಳ್ಯದ ಸೂಂತೋಡು ಡೆಂಟಲ್ ಕೇರ್‌ನ ಡಾ. ಶ್ರಮಿಕಾ ಎಂ.ಜೆ. ಪ್ರದರ್ಶನ ಮತ್ತು ಮಾರಾಟಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯು ತನ್ನ ಲಾಭಾಂಶದಲ್ಲಿ ಒಂದು ಪಾಲನ್ನು ಸಮಾಜ ಸೇವಾ ಚಟುವಟಿಕೆಗಳಿಗೆ ವಿನಿಯೋಗಿಸುತ್ತಿದೆ. ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ, ವೃದ್ಧಾಶ್ರಮಕ್ಕೆ ನೆರವು, ಮನೆ ನಿರ್ಮಾಣಕ್ಕೆ ಸಹಾಯಧನ ನೀಡುವ ಮೂಲಕ ಜನರ ಪ್ರೀತಿ ವಿಶ್ವಾಸ ಗಳಿಸಿದೆ. ಈ ನಿಟ್ಟಿನಲ್ಲಿ ಗ್ರಾಹಕರು ಕೂಡ ಇಂತಹ ಚಿನ್ನ ಮತ್ತು ವಜ್ರಾಭರಣ ಮಳಿಗೆಯಿಂದ ಆಭರಣಗಳನ್ನು ಖರೀದಿಸುವ ಮೂಲಕ ಸಂಸ್ಥೆಯನ್ನು ಪ್ರೋತ್ಸಾಹಿಸಬೇಕಿದೆ ಎಂದರು.

*ಜ.11ರಿಂದ ಆರಂಭಗೊಂಡ ಈ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯು ಜ.19ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಗ್ರಾಹಕರಿಗೆ ಮಿತದರಲ್ಲಿ ಆಭರಣಗಳನ್ನು ಖರೀದಿಸಬಹುದಾಗಿದೆ. ನುರಿತ ಕರಕುಶಲಕರ್ಮಿಗಳಿಂದ ಸಿದ್ಧಪಡಿಸಲಾದ ಆಭರಣಗಳ ಸಂಗ್ರಹವು ಆಧುನಿಕತೆಯೊಂದಿಗೆ ಸಂಪ್ರದಾಯಕ್ಕೆ ಹೆಚ್ಚು ಒತ್ತು ನೀಡುತ್ತದೆ. ಪ್ರತೀ ಖರೀದಿಗೆ ಗುಣಮಟ್ಟ, ಪಾರದರ್ಶಕತೆ ಮತ್ತು ಮೌಲ್ಯವನ್ನು ಖಚಿತಪಡಿಸುತ್ತದೆ.

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ದೇಶದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಆಭರಣಗಳ ಸಂಸ್ಥೆಯಾಗಿದೆ. ದೇಶದಲ್ಲಿ ಮದುವೆ ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದಿದೆ. ವಧುವಿನ ಅಲಂಕಾರಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಾನಾ ವಿನ್ಯಾಸದ ಆಭರಣಗಳನ್ನು ಮಾರಾಟ ಮತ್ತು ಪ್ರದರ್ಶನಕ್ಕೆ ಮುಂದಾಗಿದೆ. ಅತ್ಯಂತ ವಿಶ್ವಾಸಾರ್ಹ ಮತ್ತು ಗುಣಮಟ್ಟದಲ್ಲಿ ಖಾತರಿ ಹೊಂದಿದ ಆಭರಣಗಳನ್ನು ಮಳಿಗೆಯಲ್ಲಿ ಖರೀದಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

ಕಾರ್ಯಕ್ರಮದಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಶೋರೂಮ್ ಮ್ಯಾನೇಜರ್ ರಘುರಾಮ್ ಸಿ.ಎಸ್., ಮ್ಯಾನೇಜ್ಮೆಂಟ್ ತಂಡದ ಅಹ್ಮದ್ ನಝರ್, ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್ ಉಪಸ್ಥಿತರಿದ್ದರು.























Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News