ಮಂಗಳೂರಿನ ನೋವಿಗೋ ಸೊಲ್ಯುಶನ್ಸ್ ದಶಮಾನೋತ್ಸವ

Update: 2023-08-19 17:29 GMT

ಮಂಗಳೂರು: ನಗರದ ಫಳ್ನೀರ್ ನಲ್ಲಿ ಕರುಣಾ ಪ್ರೈಡ್ ಸೆಂಟರಿನ ಐದನೇ ಮಹಡಿಯಲ್ಲಿ ಕಾರ್ಯಾಚರಿಸುತ್ತಿ ರುವ ನೋವಿಗೋ ಸೊಲ್ಯುಶನ್ಸ್ ಐಟಿ ಕಂಪನಿಯ ದಶಮಾನೋತ್ಸವವು ಅತ್ತಾವರದ ಅವತಾರ್ ಹೋಟೆಲ್ ಸಭಾಂಗಣದಲ್ಲಿ ಶನಿವಾರ ಸಂಜೆ ಅದ್ದೂರಿಯಾಗಿ ಜರುಗಿತು.

ನೋವಿಗೋ ಸೊಲ್ಯುಶನ್ಸ್ ಕಂಪನಿಯ ಆಡಳಿತ ನಿರ್ದೇಶಕ ಮತ್ತು ಸಿಇಓ ಪ್ರವೀಣ್ ಕುಮಾರ್ ಕಲ್ಭಾವಿ, ಚೀಫ್ ಟೆಕ್ನಾಲಜಿ ಆಫೀಸರ್ ಮತ್ತು ಸಹ ಸಂಸ್ಥಾಪಕ ಮೊಹಮ್ಮದ್ ಹನೀಫ್, ಚೀಫ್ ಆಪರೇಟಿಂಗ್ ಆಫೀಸರ್ ಮತ್ತು ಸಹ ಸಂಸ್ಥಾಪಕರಾಗಿರುವ ಮೊಹಮ್ಮದ್ ಜರೂದ್, ಚೀಫ್ ಕಸ್ಟಮರ್‌ ಆಫೀಸರ್ ಮತ್ತು ಸಹ ಸಂಸ್ಥಾಪಕ ಶಿಹಾಬ್ ಕಲಂದರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. 

ಬಳಿಕ ಮಾತನಾಡಿದ ಸಿಇಓ ಪ್ರವೀಣ್  ಕುಮಾರ್ ಕಲ್ಭಾವಿಹತ್ತು ವರ್ಷಗಳ ಹಿಂದೆ ಆರಂಭಗೊಂಡ ನೋವಿಗೋ ಸಂಸ್ಥೆ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಿ ಕೊಡುತ್ತಾ, ಜಾಗತಿಕ ಐಟಿ ಮಾರುಕಟ್ಟೆಯಲ್ಲಿ  ಅಸಾಮಾನ್ಯ ಸಾಧನೆ ಮಾಡಿದೆ. ಅಲ್ಲದೇ, ಕಂಪೆನಿ ಸಿಬ್ಬಂದಿಗಳಿಗೆ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುವ ವಾತಾವರಣವನ್ನು ಕಲ್ಪಿಸಿಕೊಟ್ಟಿದೆ. ಕೇವಲ 20 ಮಂದಿಯಿಂದ ಆರಂಭಗೊಂಡ ಕಂಪೆನಿಯಲ್ಲಿಪ್ರಸ್ತುತ 800ಕ್ಕೂ ಅಧಿಕ ಐಟಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನುವುದಕ್ಕೆ ಹೆಮ್ಮೆಯಿದೆ. ನಮ್ಮ ಡೆವೆಲೆಪ್ಮೆಂಟ್ ಕೇಂದ್ರಗಳು ಬೆಂಗಳೂರು, ಮಂಗಳೂರು, ಚೆನ್ನೈ ಹಾಗೂ ಕೊಚ್ಚಿಯಲ್ಲಿ ಕಾರ್ಯಾಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಬೇರೆ ನಗರಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದರು. 

ಅಲ್ಲದೇ ಯುಎಸ್ಎ, ಸೌದಿ ಅರೇಬಿಯಾ, ಯುಎಇ, ನೆದರ್ಲ್ಯಾಂಡ್ಸಿಂಗಾಪುರದಂತಹ  ಹೊರ ರಾಷ್ಟ್ರಗಳಲ್ಲೂ ನಮ್ಮ ಗ್ಲೋಬಲ್ ಆಫೀಸ್ ಗಳಿವೆ. ಇತ್ತೀಚೆಗೆ ಯು.ಕೆಯಲ್ಲೂ ನಮ್ಮ ಸೆಂಟರ್ ಸ್ಥಾಪಿಸಿದ್ದೇವೆ. ಡಲ್ಲಾಸ್ ನಲ್ಲಿ ಪ್ರಧಾನ ಕಚೇರಿ ಇದೆ. ಜಗತ್ತಿನಾದ್ಯಂತ ಸುಮಾರು 20 ದೇಶಗಳಲ್ಲಿ ಸಂಸ್ಥೆಗೆ  ಗ್ರಾಹಕರಿದ್ದಾರೆ. ಸಂಸ್ಥೆಯ ದಶಕದ ಈ ಪಯಣದಲ್ಲಿ ಈ ಸಾಧನೆಗಾಗಿಜೊತೆಯಾಗಿ ಸಹಕರಿಸಿದ ನನ್ನ ಮೂವರು ಸಹ ಸಂಸ್ಥಾಪಕರಿಗೆ ಧನ್ಯವಾದ ಸಲ್ಲಿಸುತ್ತೇನೆ . ವಿಶೇಷವಾಗಿ ಹಲವಾರು ವರ್ಷಗಳಿಂದ ಈ ಕಂಪೆನಿಯಲ್ಲಿ ಉದ್ಯೋಗಿಗಳಾಗಿ ಕೆಲಸ ಮಾಡುತ್ತಿರುವ, ಇಲ್ಲಿ ಬಂದು ಸೇರಿರುವ  ನೋವಿಗೋ ಫ್ಯಾಮಿಲಿಯ ಎಲ್ಲಾ ಸದಸ್ಯರ ಬಗ್ಗೆಯೂ ಹೆಮ್ಮೆ ಇದೆ ಎಂದರು.

ಕಾರ್ಯಕ್ರಮದಲ್ಲಿ, ಕಂಪೆನಿಯಲ್ಲಿ 10 ವರ್ಷಗಳ ಸೇವೆ ಪೂರ್ತಿಗೊಳಿಸಿದ 9 ಉದ್ಯೋಗಿಗಳಿಗೆ ಎಲೆಕ್ಟ್ರಿಕ್ ಸ್ಕೂಟರ್ ಉಡುಗೊರೆ ನೀಡಿ ಗೌರವಿಸಲಾಯಿತು. ಜೊತೆಗೆ,  5  ವರ್ಷ ಪೂರ್ತಿಗೊಳಿಸಿದ 45 ಉದ್ಯೋಗಿಗಳಿಗೆ ಚಿನ್ನದ ನಾಣ್ಯ ಉಡುಗೊರೆ ನೀಡಿ, ಈ  ಎಲ್ಲರನ್ನು ಕುಟುಂಬ ಸಮೇತ  ಸಂಸ್ಥೆಯ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.

ಬಳಿಕ ಕಂಪೆನಿಯ ಸಿಬ್ಬಂದಿಗಳಿಗಾಗಿ ಗಾಯನ ಸ್ಪರ್ಧೆ, ಸಾಂಸ್ಕೃತಿಕ ನೃತ್ಯ ಸೇರಿದಂತೆ ಹಲವು ಸ್ಪರ್ಧೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನ ನೀಡಲಾಯಿತು. ಸ್ಪರ್ಧೆಯ ಹೊರತಾಗಿ ಮನರಂಜನಾ ಕಾರ್ಯಕ್ರಮಗಳೂ ನಡೆದವು.

ಇತ್ತೀಚೆಗೆ ಕಂಪೆನಿಯ ನೂತನ ಆಫ್ ಶೋರ್ ಡೆಲಿವರಿ ಸೆಂಟರ್ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮಂಗಳೂರಿನ ಫಳ್ನೀರ್ ನಲ್ಲಿ ಆರಂಭಗೊಂಡಿದೆ.

























 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News