ನ.19ರಿಂದ ಇಂಟಾಕ್‌ನಿಂದ ’ವಿಶ್ವ ಪರಂಪರೆಯ ಸಪ್ತಾಹ’ ಆಚರಣೆ

Update: 2024-11-18 13:34 GMT

ಮಂಗಳೂರು, ನ.18: ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ವಿಭಾಗವು ವಿಶ್ವ ಪರಂಪರೆಯ ಸಪ್ತಾಹವನ್ನು ನ.19ರಿಂದ ನ.25ರವರೆಗೆ ನಗರದ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರ ದಲ್ಲಿ ಸರಣಿ ಕಾರ್ಯಕ್ರಮಗಳೊಂದಿಗೆ ಆಚರಿಸಲಿದೆ.

ನ.19ರ ಸಂಜೆ 5:30ಕ್ಕೆ ಹರಿದಾಸ ಶೇಣಿ ಮುರಳಿ ಪ್ರಸ್ತುತಪಡಿಸುವ ವಾಲಿ-ಸುಗ್ರೀವರ ಕಾಳಗ ಕುರಿತ ಹರಿಕಥಾ ಅಧಿವೇಶನದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಕುಡ್ಲ ಆರ್ಟ್ಸ್ ಬೆಂಬಲದೊಂದಿಗೆ ನಡೆಯಲಿರುವ ಕಾರ್ಯ ಕ್ರಮದಲ್ಲಿ ಹರಿದಾಸರಿಗೆ ಸಹಕಲಾವಿದರಾಗಿ ಹಾರ್ಮೋನಿಯಂನಲ್ಲಿ ಶ್ರೀಪತಿ ಭಟ್ ಬೆಳ್ಳೇರಿ ಮತ್ತು ತಬಲಾದಲ್ಲಿ ಕೌಶಿಕ್ ಮಂಜನಾಡಿ ಸಹಕಾರ ನೀಡುವರು.

ಪ್ರತಿದಿನ ಸಂಜೆ 5:30ಕ್ಕೆ ಕಲೆ, ಸಂಸ್ಕೃತಿ ಮತ್ತು ಪರಂಪರೆಯ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ನ.20ರಂದು ಕರ್ನಾಟಕ ಜಾನಪದ ವಿವಿಯ ಮಾಜಿ ಉಪಕುಲಪತಿ ಡಾ.ಕೆ.ಚಿನ್ನಪ್ಪಗೌಡ ಮೌಖಿಕ ಮಹಾಕಾವ್ಯಗಳ ರಚನೆಯಲ್ಲಿ ದೇಶೀಯ ಜ್ಞಾನದ ಪಾತ್ರ ಕುರಿತು ಮಾತನಾಡಲಿದ್ದಾರೆ. ನ.22ರಂದು ಕಲಾವಿದ ಮತ್ತು ಸಂಶೋಧಕ ಡಾ. ಜನಾರ್ದನ ರಾವ್ ಹಾವಂಜೆ ಕಾವಿ ಕಲಾ ಪರಂಪರೆ ಎಂಬ ಕುರಿತು ಉಪನ್ಯಾಸ ನೀಡಲಿದ್ದಾರೆೆ. ನ.23ರಂದು ನಿವೃತ್ತ ಪ್ರಾಧ್ಯಾಪಕ ಡಾ.ನರೇಂದ್ರ ರೈ ದೇರ್ಲ ಒಂದು ಬೊಗಸೆ ಹಸಿರು ಭಾಷಣ ಮಾಡಲಿದ್ದಾರೆ. ನ.24ರಂದು ಕದಿಕೆ ಟ್ರಸ್ಟ್ ಸಂಸ್ಥಾಪಕಿ ಮಮತಾ ರೈ ಸಾಂಪ್ರದಾಯಿಕ ನೇಯ್ಗೆ ಪುನರುಜ್ಜೀವನ: ಉಡುಪಿ ಸೀರೆ ಕುರಿತು ಮಾತನಾಡಲಿದ್ದಾರೆ.

ಶ್ರೀನಿವಾಸ್ ಮಲ್ಯ ಅವರ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ಮಲ್ಯ ನಿವಾಸದ ಪ್ರದರ್ಶನದೊಂದಿಗೆ ನಡೆಯುವ ಈ ಪ್ರದರ್ಶನವು ನ.24ರವರೆಗೆ ಪೂ.11ರಿಂದ ಸಂಜೆ 7ರವರೆಗೆ ಮುಂದುವರಿಯಲಿದೆ. ಇಂಟಾಕ್ ಮಂಗಳೂರು ವಿಭಾಗ ದವರ ಮಂಗಳೂರಿನ ಕಟ್ಟೆಗಳ ಕುರಿತು ಪ್ರದರ್ಶನದೊಂದಿಗೆ ವಿಶ್ವ ಪರಂಪರೆಯ ಸಪ್ತಾಹವು ಮುಕ್ತಾಯಗೊಳಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News